21ರಿಂದ ಏ.4 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ

SSLC exam from 21st to 4th April
ಬಿಇಒ ಜಾಸ್ಮೀನ್ ಕಿಲ್ಲೇದಾರ
Published on

ಹುನಗುಂದ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮಾ.21 ರಿಂದ ಏ.4 ರವರೆಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.15 ರವರೆಗೆ ಅವಳಿ ತಾಲೂಕಿನ 14 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಬಿಇಒ ಜಾಸ್ಮೀನ್ ಕಿಲ್ಲೇದಾರ ತಿಳಿಸಿದರು.

ಪಟ್ಟಣದ ಬಿಇಒ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹುನಗುಂದ-ಇಳಕಲ್ಲ ತಾಲೂಕಿನಲ್ಲಿ 2611ಬಾಲಕರು, 2602 ಬಾಲಕಿಯರು ಮತ್ತು ರಿಪೀಟರ್ಸ್‌ ವಿದ್ಯಾರ್ಥಿಗಳು ಸೇರಿ ಒಟ್ಟು 5337 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷಾ ಕೇಂದ್ರಕ್ಕೆ 14 ಮುಖ್ಯ ಅಧೀಕ್ಷಕರು, 7ಉಪಮುಖ್ಯ ಅಧೀಕ್ಷಕರು, 14 ಕಸ್ಡೋಡಿಯನ್, 6 ಮಾರ್ಗಾಧಿಕಾರಿ, 14 ಸ್ಥಾನಿಕ ಜಾಗೃತಿ ದಳ, ಮೊಬೈಲ್ ಸ್ವಾಧೀನಾಧಿಕಾರಿಗಳು, 3 ಸಿಸಿಟಿವಿ ವೀಕ್ಷಕರು, ಕೊಠಡಿ ಮೇಲ್ವಿಚಾರಕರು ಮತ್ತು ಇತರ 412 ಸಿಬ್ಬಂದಿ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಒಟ್ಟು 5846 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ವಿದ್ಯಾರ್ಥಿಗಳು ವಸ ಸಂಹಿತೆ ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷೆ ಸಮಯಕ್ಕಿಂತ 30 ನಿಮಿಷ ಮುಂಚಿತವಾಗಿ ಕೇಂದ್ರದಲ್ಲಿ ಇರಬೇಕು. ಮೊಬೈಲ್ ಸಂಪೂರ್ಣ ನಿಷೇಧಿಸಲಾಗಿದೆ. ಕೇಂದ್ರದ ಸುತ್ತಲಿರುವ ಜೆರಾಕ್ಸ್ ಸೆಂಟರ್ ಮುಚ್ಚುವಂತೆ ಸೂಚಿಸಲಾಗಿದೆ. 200 ಮೀಟರ್‌ವರೆಗೆ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿ ನೇಮಿಸಲಾಗಿದೆ. ಅಂಗವಿಕಲರು ಪರಿಕ್ಷೆ ಬರೆಯಲು ನೆಲಮಹಡಿಯಲ್ಲಿಯೇ ವ್ಯವಸ್ಥೆ ಮತ್ತು ಅವರಿಗೆ ಓದಲು ಮತ್ತು ಬರೆಯಲು ಸಹಾಯಕರನ್ನು ನಿಯಮದಂತೆ ಒದಗಿಸಲಾಗುವುದು ಎಂದರು.

ಎಸ್‌ಎಸ್‌ಎಸ್‌ಎಲ್‌ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎಂ.ಕಲ್ಯಾಣಿ, ಪರೀಕ್ಷಾ ಕಾರ್ಯಾಧಿಕಾರಿ ಪ್ರಶಾಂತ ಪಟ್ಟದಕಲ್ಲ, ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ.ಪೈಲ್, ಬಿಆರ್‌ಸಿ ವಿನೋದ ಭೋವಿ, ಆನಂದ ಗದ್ದನಕೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net