

ಕೋಲಾರ: ಜಿಲ್ಲೆಯ 65 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಕನ್ನಡ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಯಶಸ್ವಿಯಾಗಿ ನಡೆದಿದ್ದು, ಕೆಲವು ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶಕ ಎಂ.ಆರ್.ಮಾರುತಿ, ಡಿಡಿಪಿಐ ಕೃಷ್ಣಮೂರ್ತಿ, ಬಿಇಒ ಮಧುಮಾಲತಿ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಡಿಡಿಪಿಐ ಕೃಷ್ಣಮೂರ್ತಿ ಪರೀಕ್ಷೆ ಹಾಜರಾತಿ ಮಾಹಿತಿ ನೀಡಿ, ಮೊದಲ ದಿನ 375 ಮಂದಿ ಗೈರಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಪರೀಕ್ಷಾ ಅವ್ಯವಹಾರ ನಡೆದಿಲ್ಲ, ಎಲ್ಲೂ ಗೊಂದಲಕ್ಕೆ ಅವಕಾಶ ನೀಡಿಲ್ಲ ಎಂದು ತಿಳಿಸಿದರು. ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ, 19,706 ವಿದ್ಯಾರ್ಥಿಗಳ ಪೈಕಿ 19,331 ಮಂದಿ ಹಾಜರಾಗಿದ್ದು, 375 ಮಂದಿ ಗೈರಾಗಿದ್ದರು.
ಪರೀಕ್ಷಾ ನೋಡಲ್ ಅಧಿಕಾರಿ ಸಗೀರಾ ಅಂಜುಂ, ಶಿಕ್ಷಣಾಧಿಕಾರಿ ವೀಣಾ, ಡಿವೈಪಿಸಿಗಳಾದ ರಾಜೇಶ್ವರಿ, ಕೋಲಾರ ತಾಲೂಕು ಬಿಇಒ ಮಧುಮಾಲತಿ ಪಡುವಣೆ, ವಿವಿಧ ತಾಲೂಕುಗಳ ಬಿಇಒಗಳಾದ ಗುರುಮೂರ್ತಿ ರಾಮಚಂದ್ರಪ್ಪ, ಮುನಿಲಕ್ಷ$್ಮಯ್ಯ, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಸಮೀವುಲ್ಲಾ, ವೆಂಕಟೇಶಬಾಬು, ತಾಲೂಕು ಪರೀಕ್ಷಾ ನೋಡಲ್ ಅಧಿಕಾರಿಗಳಾದ ಸಿ.ಎಂ.ವೆಂಕಟರಮಣಪ್ಪ, ಲಕ್ಷಿ$್ಮಕಾಂತ್, ಸೋಮಶೇಖರ್, ವೆಂಕಟಸ್ವಾಮಿ, ಕಾರ್ತಿಕ್, ಲಕ್ಷಿ$್ಮನಾರಾಯಣ ಮತ್ತಿತರ ಅಧಿಕಾರಿಗಳು ಜಿಲ್ಲಾದ್ಯಂತ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕುವಾರು ಹಾಜರಿ ವಿವರ
ಬಂಗಾರಪೇಟೆ ತಾಲೂಕಿನ 8 ಕೇಂದ್ರಗಳಲ್ಲಿ ಪ್ರಥಮ ಭಾಷೆಗೆ 2,541 ಮಂದಿ ನೋಂದಾಯಿಸಿದ್ದು, 2,495 ಮಂದಿ ಹಾಜರಾಗಿ 46 ಮಂದಿ ಗೈರಾಗಿದ್ದಾರೆ. ಕೆಜಿಎಫ್ ತಾಲೂಕಿನ 9 ಕೇಂದ್ರಗಳಲ್ಲಿ 3,257 ಮಕ್ಕಳ ಪೈಕಿ 3,190 ಮಂದಿ ಹಾಜರಾಗಿ 67 ಮಂದಿ ಗೈರಾಗಿದ್ದಾರೆ. ಕೋಲಾರ ತಾಲೂಕಿನ 18 ಕೇಂದ್ರಗಳಲ್ಲಿ 4,951 ಮಂದಿ ಪೈಕಿ 4,885 ಮಂದಿ ಹಾಜರಾಗಿ ಕೇವಲ 66 ಮಂದಿ ಗೈರಾಗಿದ್ದಾರೆ. ಮಾಲೂರು ತಾಲೂಕಿನ 8 ಕೇಂದ್ರಗಳಲ್ಲಿ 3,155 ಮಂದಿ ಪೈಕಿ 3,085 ಮಂದಿ ಹಾಜರಾಗಿದ್ದು, 70 ಮಂದಿ ಗೈರಾಗಿದ್ದಾರೆ. ಮುಳಬಾಗಿಲು ತಾಲೂಕಿನ 12 ಕೇಂದ್ರಗಳಲ್ಲಿ 3,239 ಮಂದಿ ಪೈಕಿ 33130 ಮಂದಿ ಹಾಜರಾಗಿದ್ದು, 109 ಮಂದಿ ಗೈರಾಗಿದ್ದಾರೆ, ಶ್ರೀನಿವಾಸಪುರ ತಾಲೂಕಿನ 10 ಕೇಂದ್ರಗಳಲ್ಲಿ 2,563 ಮಂದಿ ಪೈಕಿ 2546 ಮಂದಿ ಹಾಜರಾಗಿದ್ದು, 17 ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಐ ಮಾಹಿತಿ ನೀಡಿದರು.
ಹೂವು ನೀಡಿ ಸ್ವಾಗತ
ಬೆಳಗ್ಗೆ 9.-30 ರಿಂದಲೇ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ನೀಡಲಾಗಿದ್ದು, ಕೋಲಾರ ನಗರದ ಅಲಮಿನ್ ಪ್ರೌಢಶಾಲೆ ಕೇಂದ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ಅವರು ಮಕ್ಕಳಿಗೆ ಹೂವು ನೀಡುವ ಮೂಲಕ ಸ್ವಾಗತಿಸಿ ಆತ್ಮಸ್ಥೆ$ರ್ಯ ತುಂಬಿದರು. ಮೊದಲ ದಿನದ ಪರೀಕ್ಷೆ ಬರೆಯುವ ಆತಂಕ ಮತ್ತು ಇಲಾಖೆ ಸಿಸಿ ಕ್ಯಾಮರಾ, ವೆಬ್ ಕಾಸ್ಟಿಂಗ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಭಯ ಕಾಡಿದ್ದರೂ ಮಕ್ಕಳು ಆತ್ಮಸ್ಥೆ$ರ್ಯದಿಂದಲೇ ಕೇಂದ್ರದತ್ತ ಬಂದಿದ್ದು ಕಂಡು ಬಂತು. ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳು, ರಾಜ್ಯ ಜಾಗೃತದಳ ತಂಡ ಸೇರಿ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.