ದ.ಕ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಶಾಂತ ರೀತಿಯಲ್ಲಿ ಆರಂಭ

IMG-20220328-WA0006
Published on

ಮಂಗಳೂರು: ಗೊಂದಲ, ಆತಂಕದ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಶಾಂತ ರೀತಿಯಲ್ಲಿ ಆರಂಭಗೊಂಡಿದೆ. ಬಹುತೇಕ ವಿದ್ಯಾರ್ಥಿಗಳನ್ನು ಹೆತ್ತವರೇ ಪರೀಕ್ಷಾ ಕೇಂದ್ರದ ವರೆಗೆ ಕರೆತಂದು ಬಿಟ್ಟಿದ್ದಾರೆ. ಧರ್ಮಗುರುಗಳ, ಪ್ರಮುಖರ ಕರೆಯಂತೆ, ಹೆತ್ತವರು ಮಕ್ಕಳಿಗೆ ಪರೀಕ್ಷೆಯ ಪ್ರಾಮುಖ್ಯತೆ ಕುರಿತು ತಿಳಿಸಿರುವುದರಿಂದ ಎಲ್ಲೂ ಗೊಂದಲದ ವಾತಾವರಣ ಉಂಟಾಗಿಲ್ಲ. ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸಿಯೇ ಪರೀಕ್ಷೆಗೆ ಹಾಜರಾಗಿದ್ದು, ಹಿಜಾಬ್ ಧರಿಸಿ ಬಂದವರು ಶಾಲಾ ಆವರಣದಲ್ಲಿ ತೆಗೆದಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿಯಾಗಿರುವುದರಿಂದ ಹೊರಗಿನವರಿಗೆ ಗುಂಪು ಸೇರಲು ಅವಕಾಶ ಇರಲಿಲ್ಲ. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net