

ಮೈಸೂರು: ನಗರದ ಮರಿಮಲ್ಲಪ್ಪ ಪ್ರೌಢ ಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98 ಫಲಿತಾಂಶ ಪಡೆದುಕೊಂಡಿದೆ. ಒಟ್ಟು 416 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಎದುರಿಸಿದ್ದರು.
ಭರತ್ ಎಸ್. ಪ್ರಸಾದ್ 619, ಜಿ.ಎಸ್. ಹೆಮಿಷಾ ಪ್ರಸಾದ್ 604, ಜಿ. ಇಂಚರಾ 611, ಸುಪ್ರಿತಾ ಜಿ. ಗೌಡ 613, ಸುಪ್ರಿಯಾ ಎಸ್. ಕೇಲ್ಕರ್ 608, ಎಸ್. ವಿದಾರ್ಥಿ 608, ಜುನೈದ್ ಉರ್ ರೆಹಮಾನ್ 604, ಕೆ. ನೀಲ್‌ಗಗನ್ 606, ಸಂಸ್ಕೃತ್ 618, ಅದಿತಿ ವಿ. ಶಾಸ್ತ್ರಿ 619, ಅಂಜಲಿ ವಿ. ಶಾಸ್ತ್ರಿ 619, ಆರ್. ಭೂಮಿಕಾ 621, ಆರ್. ಕೀರ್ತನಾ 614, ಎಂ. ನಯನಾ 608, ಬಿ.ಆರ್. ಪೂಜಾ 614, ಬಿ. ಸಾಯಿ ಪ್ರಾಪ್ತಿ ಕೊಂಡಯ್ಯ 607, ಎಸ್. ಸೋನಿಯಾ 608, ಜಿ.ಸಿ. ಚೇತನ್ 603, ಬಿ. ದಿಗಂತ್ 606, ಎಂ. ಶ್ರವಣ್ ಅರಸ್ 615 ಉತ್ತಮ ಸಾಧನೆ ತೋರಿದ್ದಾರೆ.
ನಮ್ಮ ಶಾಲೆಯ ಭೂಮಿಕಾ 621 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 5ನೇ ಟಾಪರ್ ಆಗಿ ಹೊರಹಮ್ಮಿರುವುದು ಸಂತಸದ ವಿಚಾರ. ಪ್ರತಿ ಬಾರಿಯೂ ನಮ್ಮ ಶಾಲೆಯು ಉತ್ತಮ ಫಲಿತಾಂಶ ಪಡೆದುಕೊಳ್ಳುವ ಜತೆಗೆ ನಮ್ಮ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತಿರುತ್ತಾರೆ. ಅದೇ ರೀತಿ ಈ ಬಾರಿಯೂ ಉತ್ತಮ ಫಲಿತಾಂಶ ಬಂದಿದೆ. ಇದಕ್ಕೆ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರೋತ್ಸಾಹ ಹಾಗೂ ಶಿಕ್ಷಕರ ಸಹಕಾರ ಕಾರಣ ಎಂದು ಮುಖ್ಯೋಪಾಧ್ಯಾಯಿನಿ ಎಸ್. ಮಮತಾ ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್. ಭೂಮಿಕಾ ಉತ್ತಮ ಸಾಧನೆ
ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿನಿ ಆರ್. ಭೂಮಿಕಾ 621 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 5ನೇ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಈಕೆ ಸಿದ್ದಪ್ಪವೃತ್ತ ಬಳಿಯ ನಿವಾಸಿ ಡಿ. ರಂಗನಾಥ್- ಗಾಯತ್ರಿ ದಂಪತಿ ಪುತ್ರಿ.
‘ಶಾಲಾ ಶಿಕ್ಷಕರು ಹಾಗೂ ಪಾಲಕರ ಮಾರ್ಗದರ್ಶನದಿಂದ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಯಿತು. ಟಾಪರ್‌ಗಳಿ ಗೋಸ್ಕರ ಶಾಲೆಯಲ್ಲಿ ವಿಶೇಷ ತರಗತಿಯನ್ನು ತೆಗೆದುಕೊಳ್ಳಲಾಗುತಿತ್ತು, ಇದರಿಂದ ಹೆಚ್ಚು ಅಂಕಗಳು ದೊರೆಯುವಂತಾಯಿತು’ ಎಂದು ಭೂಮಿಕಾ ಸಂತಸ ಹಂಚಿಕೊಂಡಿದ್ದಾರೆ.