ತಡಸದಲ್ಲಿ ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ

TADAS SANMAN
Published on

ತಡಸ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಕುರುಬ ಸಮಾಜದ ಇಬ್ಬರು ವಿದ್ಯಾರ್ಥಿಗಳನ್ನು ತಡಸ ಗ್ರಾಮದ ಶ್ರೀ ಹನುಮಂತ ದೇವರ ದೇವಸ್ಥಾನದಲ್ಲಿ ಕುರುಬ ಸಮಾಜ ಅಭಿವೃದ್ಧಿ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂಬಂಧ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಬಂಕಾಪುರ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ವೀಣಾ ರಮೇಶ ಗುರಪ್ಪನವರ ಶೇ. 97.6 ಹಾಗೂ ರಾಮನಕೊಪ್ಪದ ಸರ್ಕಾರಿ ಪ್ರೌಢ ಶಾಲೆಯ ಲಕ್ಷ್ಮೀ ಮಂಜುನಾಥ ಗೋಣೆಪ್ಪನವರ ಶೇ. 92.48 ಅಂಕ ಪಡೆದಿದ್ದಕ್ಕೆ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಫಕೀರಪ್ಪ ಕುರಬರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಎನ್.ಎಂ. ಬಮ್ಮನಕಟ್ಟಿ, ವೀರಪ್ಪ ಗೋ ಗೋಣೆಪ್ಪನವರ, ಗುರಪ್ಪ ಗೋಣೆಪ್ಪನವರ, ರಮೇಶ ಗುರಪ್ಪನವರ, ಪರಸಪ್ಪ ಹುಲಸೋಗಿ, ಇತರರು ಉಪಸ್ಥಿತರಿದ್ದರು.

ರಮೇಶ ಓಲೇಕಾರ ಮಾತನಾಡಿ, ವಿದ್ಯಾರ್ಥಿಗಳು ಗಣಿತ ಹಾಗೂ ವಿಜ್ಞಾನ ವಿಷಯಗಳ ಮೇಲೆ ಹೆಚ್ಚು ಆಸಕ್ತಿ ವಹಿಸುವ ಮೂಲಕ ಸಮಾಜ ಹಾಗೂ ದೇಶಕ್ಕೆ ಉತ್ತಮ ಕೊಡುಗೆಗಳನ್ನು ಹೇಗೆ ನೀಡಬಹುದು ಎಂಬುದನ್ನು ವಿವರಿಸಿದರು. ಈರಣ್ಣ ಗೋಣೆಪ್ಪನವರ, ಮುತ್ತು ಗಡೇಲಿ, ಹನಮಂತಪ್ಪ ಕುರುಬರ ಹಾಗೂ ರವಿ ಇಂದೂರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net