ಎಸ್ಸೆಸ್ಸೆಲ್ಸಿ ಸಾಧಕಿ ಪುನೀತಾಗೆ ಸನ್ಮಾನ

ಮದ್ದೂರು ತಾಲೂಕಿನ ಹುಳಗನಹಳ್ಳಿ ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ಸಿ.ಪುನೀತಾಗೆ ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಂದೀಶ್‌ಗೌಡ ತವರಿನ ಸನ್ಮಾನ ಮಾಡಿ ಗೌರವಿಸಿದರು. ಚಂದ್ರಶೇಖರ್, ಹೇಮಾವತಿ, ದಿಲೀಪ್‌ಕುಮಾರ್, ಕೃಷ್ಣಪ್ಪ, ಚಿಕ್ಕೋನು, ಚಲುವರಾಜು, ರಮೇಶ್, ಶಿವರಾಮಣ್ಣ ಇತರರಿದ್ದರು.
ಮದ್ದೂರು ತಾಲೂಕಿನ ಹುಳಗನಹಳ್ಳಿ ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ಸಿ.ಪುನೀತಾಗೆ ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಂದೀಶ್‌ಗೌಡ ತವರಿನ ಸನ್ಮಾನ ಮಾಡಿ ಗೌರವಿಸಿದರು. ಚಂದ್ರಶೇಖರ್, ಹೇಮಾವತಿ, ದಿಲೀಪ್‌ಕುಮಾರ್, ಕೃಷ್ಣಪ್ಪ, ಚಿಕ್ಕೋನು, ಚಲುವರಾಜು, ರಮೇಶ್, ಶಿವರಾಮಣ್ಣ ಇತರರಿದ್ದರು.
Published on

ಮದ್ದೂರು: ತಾಲೂಕಿನ ಹುಳಗನಹಳ್ಳಿ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ ಸಿ.ಪುನೀತಾ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಂದೀಶ್‌ಗೌಡ ಪ್ರಶಂಸೆ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ಸಿ.ಪುನೀತಾಗೆ ಶನಿವಾರ ತವರಿನ ಸನ್ಮಾನ ಮಾಡಿ ಮಾತನಾಡಿದರು, ವಿದ್ಯಾರ್ಥಿನಿ ಸಿ.ಪುನೀತಾ ಹುಳಗನಹಳ್ಳಿ ಗ್ರಾಮದ ಚಂದ್ರಶೇಖರ್‌ಹೇಮಾವತಿ ರೈತ ದಂಪತಿ ಪುತ್ರಿಯಾಗಿ ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವುದು ಮೆಚ್ಚುಗೆಯ ಸಂಗತಿ ಎಂದರು.

ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳಲ್ಲಿ ಆಗಾಧ ಶಕ್ತಿಯಿದ್ದು, ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಪಾಲಕರು ಮತ್ತು ಶಿಕ್ಷಕರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿನಿ ಸಿ.ಪುನೀತಾಳ ಉನ್ನತ ವ್ಯಾಸಂಗಕ್ಕೆ ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದ ಅವರು, ಟ್ರಸ್ಟ್ ವತಿಯಿಂದ ಈಗಾಗಲೇ ಹಲವಾರು ರೀತಿಯ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.

ಪಿಡಿಒ ಲೀಲಾವತಿ ಮಾತನಾಡಿ, ಸಿ.ಪುನೀತಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಗಳಿಸುವ ಮೂಲಕ ಅದ್ವಿತೀಯ ಸಾಧನೆ ಮಾಡುವ ಮೂಲಕ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿರುವುದು ಪ್ರಶಂಸನೀಯ ಎಂದರು. ವಿದ್ಯಾರ್ಥಿನಿ ಸಿ.ಪುನೀತಾ ಅವರ ಪಾಲಕರಾದ ಚಂದ್ರಶೇಖರ್, ಹೇಮಾವತಿ, ಉದ್ಯಮಿ ದಿಲೀಪ್‌ಕುಮಾರ್, ಮುಖಂಡರಾದ ಕೃಷ್ಣಪ್ಪ, ಚಿಕ್ಕೋನು, ಚಲುವರಾಜು, ರಮೇಶ್, ಶಿವರಾಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net