

ಕೋಲಾರ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಪರೀಕ್ಷೆಗೆ ಹಾಜರಾಗಿದ್ದ ಜಿಲ್ಲೆಯ 18,560 ವಿದ್ಯಾರ್ಥಿಗಳ ಪೈಕಿ 12,708 ಮಂದಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಗೆ ಶೇ.68.37 ಫಲಿತಾಂಶ ಬಂದಿದ್ದು, ರಾಜ್ಯದಲ್ಲಿ ಜಿಲ್ಲೆ 14ನೇ ಸ್ಥಾನ ಪಡೆದುಕೊಂಡಿದೆ.
ಜಿಲ್ಲೆಯ ಮುಳಬಾಗಿಲು ಅಮರಜ್ಯೋತಿ ಶಾಲೆಯ ಎಂ.ರಕ್ಷಾ ಹಾಗೂ ಕೆಜಿಎಫ್ ನಗರದ ಮಹಾವೀರ್ ಜೈನ್ ಶಾಲೆಯ ಎಸ್.ಭಾವನಿಕಾ 624 ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈ ಕುರಿತು ವಾಹಿತಿ ನೀಡಿರುವ ಅವರು, ಪರೀಕ್ಷೆಗೆ ಕುಳಿತಿದ್ದ 9,120 ಬಾಲಕರ ಪೈಕಿ 5,738 ಮಂದಿ ಉತ್ತೀರ್ಣರಾಗಿದ್ದು, ಶೇ.62.92 ಫಲಿತಾಂಶ ಬಂದಿದೆ. ಹಾಗೆಯೇ 9,466 ಬಾಲಕಿಯರ ಪೈಕಿ 6,970 ಮಂದಿ ಉತ್ತೀರ್ಣರಾಗಿ ಶೇ.73.63 ಫಲಿತಾಂಶ ಪಡೆದಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಅಮರಜ್ಯೋತಿ ಶಾಲೆಯ ಜಿ.ಅನು ಹಾಗೂ ಕೋಲಾರ ತಾಲೂಕು ಸೀತಿ ಬಿಜಿಎಸ್ ಶಾಲೆಯ ಕೆ.ಎಸ್.ತೇಜಸ್ ಹಾಗೂ ಬಂಗಾರಪೇಟೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ನಾರಾಯಣಸ್ವಾಮಿ 623 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಜಿಲ್ಲೆಗೆ ಗುಣಾತ್ಮಕ ಫಲಿತಾಂಶ ತಂದುಕೊಟ್ಟ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಪರವಾಗಿ ಡಿಡಿಪಿಐ ಕೃಷ್ಣಮೂರ್ತಿ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಸಗೀರಾ ಅಂಜುಂ, ಶಿಕ್ಷಣಾಧಿಕಾರಿ ವೀಣಾ, ಡಿವೈಪಿಸಿಗಳಾದ ರಾಜೇಶ್ವರಿ, ಬಿಇಒಗಳಾದ ಮಧುವಾಲತಿ, ಪಡುವಣೆ, ಮುನಿಲಕ್ಷ್ಮಯ್ಯ, ಚಂದ್ರಕಲಾ, ಅನಿತಾ, ಗುರುಮೂರ್ತಿ, ರಾಮಚಂದ್ರಪ್ಪ, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ವೆಂಕಟೇಶಬಾಬು, ಶರಣಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ರೈತನ ಮಗಳಿಗೆ ಹಿರಿಮೆ: ಅಮರಜ್ಯೋತಿ ಶಾಲೆಯ ವಿದ್ಯಾರ್ಥಿನಿ ಎಂ.ರಕ್ಷಾ ಪುರಾಣಪ್ರಸಿದ್ದ ಕುರುಡು ಮಲೆಯ ರೈತ ಜಿ.ಮಂಜುನಾಥ್ ಮತ್ತು ಪ್ರತಿಭಾ ದಂಪತಿ ಪುತ್ರಿಯಾಗಿದ್ದು, ಇಂಗ್ಲಿಷ್ ವಿಷಯವೊಂದರಲ್ಲಿ ವಾತ್ರ 99 ಅಂಕ ಗಳಿಸಿದ್ದು, ಉಳಿದೆಲ್ಲಾ ವಿಷಯಗಳಲ್ಲಿ ಶೇ.100 ಸಾಧನೆ ವಾಡಿದ್ದು, ಶಾಲೆಯ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಕಾರ್ಯದರ್ಶಿ ಅಶೋಕ್ ಹಾಗೂ ಮುಖ್ಯಶಿಕ್ಷಕ ಚೆಂಗಾರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.
ಭಾವನಿಕಾಗೂ 624: ಕೆಜಿಎಫ್‌ನ ಮಹಾವೀರ್ ಜೈನ್ ಶಾಲೆಯ ವಿದ್ಯಾರ್ಥಿನಿ ಎಸ್.ಭಾವನಿಕ 624 ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದು, ಎಂ.ಸಂದೀಲ್‌ಕುವಾರ್, ಬಿ.ಸೂರ್ಯಕಲಾ ದಂಪತಿ ಪುತ್ರಿಯಾಗಿದ್ದು, ಈಕೆಯೂ ಇಂಗ್ಲೀಷ್‌ನಲ್ಲಿ 99 ಅಂಕ ಪಡೆದಿದ್ದು, ಉಳಿದೆಲ್ಲಾ ವಿಷಯಗಳಲ್ಲೂ ಶೇ.100 ಸಾಧನೆ ವಾಡಿ, ಟಾಫರ್ಸ್ ಆಗಿರುವ ಈ ಇಬ್ಬರು ವಿದ್ಯಾರ್ಥಿನಿಯರು ವೈದ್ಯರಾಗುವ ಆಸೆ ವ್ಯಕ್ತಪಡಿಸಿದ್ದಾರೆ.
ಐವರಿಗೆ 622 ಅಂಕ: ನಗರದ ಚಿನ್ಮಯ ಶಾಲೆಯ ಎನ್.ಗಾನಶ್ರೀ, ಅಮರಜ್ಯೋತಿ ಶಾಲೆಯ ಎ.ಕಾವ್ಯಶ್ರೀ, ಶ್ರೀನಿವಾಸಪುರ ವೇಣು ವಿದ್ಯಾಸಂಸ್ಥೆಯ ಎಚ್.ವಾನ್ಯಶ್ರೀ, ಕೋಲಾರದ ಅಮರಜ್ಯೋತಿ ಶಾಲೆಯ ನಯನಾ, ಕೋಲಾರದ ವ್ಯಾಲಿ ಪಬ್ಲಿಕ್ ಶಾಲೆಯ ಪ್ರಣವ್ ಅವರು 622 ಅಂಕಗಳೊಂದಿಗೆ ಜಿಲ್ಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.