ಎಸ್‌ಎಸ್‌ಎಲ್‌ಸಿ ಪ್ರಥಮ ಸ್ಥಾನದ ಗುರಿ

sslc
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 9 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಗ್ರಾಮಾಂತರ ಜಿಲ್ಲೆ ಈ ಬಾರಿ ಪ್ರಥಮ ಸ್ಥಾನದತ್ತ ಕಣ್ಣಿಟ್ಟಿದೆ. ಇದಕ್ಕಾಗಿ ಸಾಕಷ್ಟು ತಾಲೀಮು ನಡೆಸುತ್ತಿದ್ದು, ಪ್ರತೀ ಶಾಲೆಯಲ್ಲೂ ಶೇ.100 ಲಿತಾಂಶದ ನಿರೀಕ್ಷೆ ವ್ಯಕ್ತಪಡಿಸಿದೆ.

ಮಾ.21ರಿಂದ ಏ.4 ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲು ಈ ಬಾರಿ ಜಿಲ್ಲೆಯ ನಾಲ್ಕೂ ತಾಲೂಕುಗಳಿಂದ 14142 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ನಾಲ್ಕೈದು ವರ್ಷದ ಸಾಲಿನಲ್ಲಿ ಎಎಸ್‌ಎಲ್‌ಸಿ ಲಿತಾಂಶದಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಗ್ರಾಮಾಂತರ ಜಿಲ್ಲೆ ಈ ಬಾರಿ ಪ್ರಥಮ ಸ್ಥಾನದತ್ತ ಗುರಿ ಇಟ್ಟಿದೆ. ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಸೇರಿ ನಾಲ್ಕೂ ತಾಲೂಕಿನಲ್ಲಿ ಕಳೆದ ಬಾರಿ 51 ಪರೀಕ್ಷಾ ಕೇಂದ್ರಗಳನ್ನು ನಿಗಧಿಪಡಿಸಲಾಗಿತ್ತು ಈ ಬಾರಿ ಪರೀಕ್ಷಾ ಕೇಂದ್ರಗಳು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

 ಏರಿಳಿತ: 2019-20ನೇ ಸಾಲಿನಲ್ಲಿ ರಾಜ್ಯದಲ್ಲೇ 16 ನೇ ಸ್ಥಾನದಲ್ಲಿದ್ದ ಎಸ್ಸೆಸ್ಸೆಲ್ಸಿ ಲಿತಾಂಶ 2020-21ರಲ್ಲಿ ದಿಢೀರನೇ 3ನೇ ಸ್ಥಾನಕ್ಕೆ ಜಿಗಿದಿತ್ತು. ನಂತರ 2021-22ರಲ್ಲಿ 8 ನೇ ಸ್ಥಾನಕ್ಕೆ ಇಳಿದಿದ್ದ ಲಿತಾಂಶ ಕಳೆದ 2022-23ರಲ್ಲಿ ಮತ್ತೆ ನಾಲ್ಕನೇ ಸ್ಥಾನಕ್ಕೇರಿತ್ತು. 2023-24 ನೇ ಸಾಲಿನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕಳೆದ ನಾಲ್ಕೈದು ವರ್ಷದ ಲಿತಾಂಶದಲ್ಲಿ ಸಾಕಷ್ಟು ಏರಿಳಿತ ಕಂಡುಬಂದಿದೆ. ಆದರೆ ಈ ಬಾರಿ ಶತಾಯಗತಾಯ ಪ್ರಥಮ ಸ್ಥಾನಗಳಿಸಲು ಗುರಿ ಇಟ್ಟಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಲ್ಲಿ ಸಾಕಷ್ಟು ಬೆವರುಹರಿಸಿದೆ.

39 ಶಾಲೆಗಳ ಮೇಲೆ ನಿಗಾ: ಜಿಲ್ಲೆಯಲ್ಲಿನ 39 ಶಾಲೆಗಳಲ್ಲಿ ಪ್ರಸ್ತುತ ಶೇ.60 ಲಿತಾಂಶ ಗುರುತಿಸಿದ್ದು, ಇಷ್ಟೂ ಶಾಲೆಗಳಲ್ಲಿ ಶೇ.100 ಲಿತಾಂಶ ಕಾಣಲು ಇಲಾಖೆ ಹೆಚ್ಚಿನ ನಿಗಾ ವಹಿಸಿದೆ. ಇದಕ್ಕಾಗಿ ಪ್ರತಿ ಶಾಲೆಗೆ ಒಬ್ಬರಂತೆ 39 ಮಂದಿ ವಿಶೇಷ ಅಧಿಕಾರಿಗಳನ್ನು ನಿಯೋಜಿಸಿದ್ದು, ಪರೀಕ್ಷೆಗೆ ಉಳಿದಿರುವ ಅಷ್ಟೂ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಲಿತಾಂಶ ತರಿಸುವ ಜವಾಬ್ದಾರಿ ವಹಿಸಲಾಗಿದೆ. ಶಾಲೆಗಳ ಮುಖ್ಯಶಿಕ್ಷಕರಿಗೆ ಟಾರ್ಗೆಟ್ ನಿಗಧಿಪಡಿಸಲಾಗಿದ್ದು, ಶತಾಯಗತಾಯ ಶೇ.100 ಲಿತಾಂಶ ತರಿಸುವಂತೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. ಇದಕ್ಕೆ ಬೇಕಾದ ಸಲಕರಣೆಗಳು, ಮಾರ್ಗದರ್ಶನ, ಸಂಪನ್ಮೂಲ ವ್ಯಕ್ತಿಗಳನ್ನು ದೊರಕಿಸಿಕೊಟ್ಟಿದೆ.

ಜೂಮ್ ಮೀಟಿಂಗ್: ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಶಿಕ್ಷಣ ಇಲಾಖೆ ಉಪನಿರ್ದೇಶಕರ ಜತೆ ವೇಳಾಪಟ್ಟಿಯಂತೆ ಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ಜೂಮ್ ಮೀಟಿಂಗ್ ನಡೆಸಲಾಗುತ್ತಿದೆ, ಜತೆಗೆ ಮಕ್ಕಳೊಂದಿಗೆ ಸಂವಹನ ನಡೆಸುವುದು ಅವರಲ್ಲಿನ ಅನುಮಾನಗಳನ್ನು ಬಗೆಹರಿಸುವುದು ಆತ್ಮವಿಶ್ವಾಸ ತುಂಬಿಸುವುದು ಸೇರಿ ಉತ್ತಮ ಲಿತಾಂಶಕ್ಕೆ ಅಗತ್ಯವಿರುವ ಎಲ್ಲ ಕಸರತ್ತು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಶಿಕ್ಷಣ ಇಲಾಖೆ ಚಿತ್ತ: ಕಳೆದ ಸಾಲಿನಲ್ಲಿ 11900 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು, 59 ಶಾಲೆಗಳಿಗೆ ಶೇ.100 ಲಿತಾಂಶ ಬಂದಿತ್ತು. ಕಳೆದ ಸಾಲಿನಲ್ಲಿ ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿ ಎಲ್.ಸ್ನೇಹಾ 621 ಅಂಕಪಡೆಯುವ ಮೂಲಕ ಜಿಲ್ಲೆಗೆ ಟಾರ್ ಆಗಿ ಹೊರಹೊಮ್ಮಿದ್ದರು. ನಂತರದಲ್ಲಿ ದೇವನಹಳ್ಳಿ ಟೌನ್ ಶಾಂತಿನಿಕೇತನ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ಮಹೇಶ್ವರಿ 620 ಅಂಕ ಪಡೆಯುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ದಕ್ಕಿಸಿಕೊಂಡಿದ್ದರು. ದೊಡ್ಡಬಳ್ಳಾಪುರ ಟೌನ್ ನಳಂದ ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ಸಿ.ಪೂರ್ಣಶ್ರೀ 619 ಅಂಕದೊಂದಿಗೆ ಮೂರನೇ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದರು. ಎಂದಿನಂತೆ ಕಳೆದ ಬಾರಿಯೂ ಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದರು. ನಾಲ್ಕು ತಾಲೂಕುಗಳನ್ನೊಳಗೊಂಡ ಜಿಲ್ಲೆ ಕಳೆದ ಬಾರಿ ಶೇ.83.67 ಲಿತಾಂಶ ಬಂದಿದ್ದು, 59 ಶಾಲೆಗಳಲ್ಲಿ ಶೇ.100 ಲಿತಾಂಶ ಬಂದಿತ್ತು. ಈ ಬಾರಿ ಮತ್ತಷ್ಟು ಟಾರ್‌ಗಳನ್ನು ಕಾಣುವ ನಿರೀಕ್ಷೆ ಜತೆಗೆ ಜಿಲ್ಲೆಯಲ್ಲಿ ಶೇ.100 ರ ಲಿತಾಂಶದತ್ತ ಇಲಾಖೆ ಚಿತ್ತ ನೆಟ್ಟಿದೆ.

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಲಿತಾಂಶದ ಗುರಿಯೊಂದಿಗೆ ತಾಲೀಮು ನಡೆಯುತ್ತಿದೆ, ಪ್ರತಿ ಶಾಲೆಯಲ್ಲಿಯೂ ಪ್ರತಿ ವಿದ್ಯಾರ್ಥಿ ಮೇಲೆಯೂ ಗಮನ ಕೇಂದ್ರೀಕರಿಸಲಾಗಿದೆ, ಆಯಾ ಶಾಲೆಗಳ ಮುಖ್ಯಶಿಕ್ಷಕರಿಗೆ ಹೆಚ್ಚಿನ ಹೊಣೆ ನೀಡಿದ್ದು, ಇಲಾಖೆಯಿಂದ ಸಲಹೆ, ಮಾರ್ಗದರ್ಶನ ಮತ್ತಿತರ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಪ್ರಸ್ತುತ 39 ಶಾಲೆಗಳಲ್ಲಿ ಶೇ.60 ರಲಿತಾಂಶವಿದ್ದು ಅಷ್ಟೂ ಶಾಲೆಗಳಲ್ಲಿ ಶೇ.100 ಲಿತಾಂಶದ ಗುರಿಯೊಂದಿಗೆ ಸಿದ್ದತೆ ನಡೆಸಲಾಗಿದೆ,.

ಬೈಲಾಂಜನಪ್ಪ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net