ಎಸ್‌ಎಸ್‌ಎಲ್‌ಸಿ ಪರೀಕ್ಷೆ -2ರ ಡೇಟ್‌ ಫಿಕ್ಸ್‌; ವೇಳಾಪಟ್ಟಿ ಹೀಗಿದೆ...

exam.jpg
Published on

ಬೆಂಗಳೂರು:  ಎಸ್‌ಎಸ್‌ಎಲ್‌ಸಿ ಪರೀಕ್ಷೆ -1ರ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ, 2,28,763 ವಿದ್ಯಾರ್ಥಿಗಳು ಫೇಲ್​ ಆಗಿದ್ದಾರೆ.

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಚಿಂತೆ ಮಾಡಬೇಡಿ. ಯಾಕೆಂದರೆ ಇನ್ನೂ ಉತ್ತಮ ಅಂಕಗಳನ್ನು ಗಳಿಸಲು ಪರೀಕ್ಷಾ ಮಂಡಳಿ ಅವಕಾಶ ಕಲ್ಪಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ದಿನಾಂಕ ನಿಗಧಿಯಾಗಿದ್ದು, ವೇಳಾಪಟ್ಟಿ ಪ್ರಕಟಿಸಿದೆ.

SSLC ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಆದರೆ ಫೇಲ್​ ಆದ ವಿದ್ಯಾರ್ಥಿಗಳು ಟೆನ್ಶನ್​ ಮಾಡುವ ಅವಶ್ಯಕೆಯಿಲ್ಲ. ಮರು ಪರೀಕ್ಷೆ ಬರೆಯುವ ಮೂಲಕ ಪಾಸ್​ ಮಾಡಬಹುದಾಗಿದೆ.

ವಿದ್ಯಾರ್ಥಿಗಳಿಗೆ ಒಟ್ಟು ಮೂರು ಗಂಟೆ 15 ನಿಮಿಷಗಳ ಕಾಲವಕಾಶ ನೀಡಲಾಗಿದೆ. ಸರಿಯಾಗಿ ಪ್ರಶ್ನೆಗಳನ್ನು ಓದಿ, ಆರ್ಥೈಸಿಕೊಂಡು ಪರೀಕ್ಷೆ ಬರೆದು ಪಾಸ್​ ಮಾಡಬಹುದಾಗಿದೆ.

ಪರೀಕ್ಷಾ ಅವಧಿ:  ಬೆಳಗ್ಗೆ 10:15 ರಿಂದ ಮಧ್ಯಾಹ್ನ 01:15

7-6-2024- ಪ್ರಥಮ ಭಾಷೆ

8-6-2024- ತೃತೀಯ ಭಾಷೆ

10-6-2024- ಗಣಿತ, ಸಮಾಜ ಶಾಸ್ತ್ರ (ಕೋರ್ ಸಬ್ಜೆಕ್ಟ್)

11-6-2024- ಅರ್ಥ ಶಾಸ್ತ್ರ, ಎಲಿಮೆಂಟ್ಸ್‌ ಆಫ್‌ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌

12-6-2024- ವಿಜ್ಞಾನ ಹಾಗೂ ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ

13-6-2024- ದ್ವಿತೀಯ ಭಾಷೆ (ಇಂಗ್ಲೀಷ್‌ ಹಾಗೂ ಕನ್ನಡ)

14-6-2024 – ಸಮಾಜ ವಿಜ್ಞಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net