ಎಸ್‌ಎಸ್‌ಎಲ್‌ಸಿ ಫಲಿತಾಂಶ: ಕೊಡಗಿಗೆ 5ನೇ ಸ್ಥಾನ

sslc
Published on

ಮಡಿಕೇರಿ:

ಶುಕ್ರವಾರ ಪ್ರಕಟವಾದ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೊಡಗು 5 ಸ್ಥಾನಕ್ಕೆ ಇಳಿದಿದೆ. ಜಿಲ್ಲೆಯ 171 ಪ್ರೌಢ ಶಾಲೆಗಳ ಒಟ್ಟು 6,673 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 5,486 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 82.21ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 2,723 ಬಾಲಕಿಯರು, 2,420 ಬಾಲಕರು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಗ್ರಾಮೀಣ 4,172 (80.72%), ನಗರದ ವಿದ್ಯಾರ್ಥಿಗಳು 970 (85.61%) ಪಾಸಾಗಿದ್ದಾರೆ. ಕಳೆದ ವರ್ಷ ಕೊಡಗು ಶೇ. 88.67ರಷ್ಟು ಫಲಿತಾಂಶ ಪಡೆದಿದ್ದರೂ, ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು.

ವಿರಾಜಪೇಟೆ ಶ್ರೀ ಕಾವೇರಿ ಪ್ರೌಢಶಾಲೆಯ ಟಿ.ಎಂ. ಆಶ್ರಯ್ ಅಕ್ಕಮ್ಮ, ಸೋಮವಾರಪೇಟೆ ವಿಶ್ವಮಾನವ ಕುವೆಂಪು ಪ್ರೌಢ ಶಾಲೆಯ ಪಂಚಮಿ 625ಕ್ಕೆ 621 ಅಂಕ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.

625ಕ್ಕೆ 620 ಅಂಕ ಪಡೆದಿರುವ ವಿರಾಜಪೇಟೆ ತಾಲೂಕು ಕಳತ್‌ಮಾಡು ಲಯನ್ಸ್ ಪ್ರೌಢಶಾಲೆಯ ತೇಜಸ್ ಭೀಮಯ್ಯ, ಮೂರ್ನಾಡು ಜ್ಞಾನ ಜ್ಯೋತಿ ಪ್ರೌಢ ಶಾಲೆಯ ಸಿ.ಎಂ. ಮೊಹಮದ್ ಸಾಹಿಲ್ ಹಾಗೂ ಕುಶಾಲನಗರ ಕೂಡುಮಂಗಳೂರು ಯೂನಿಕ್ ಅಕಾಡೆಮಿಯ ಕೆ.ಎಂ. ಸಮೃದ್ಧಿ ಆಚಾರ್ ಜಿಲ್ಲೆಗೆ 2ನೇ ಸ್ಥಾನ ಪಡೆದಿದ್ದಾರೆ.

625ಕ್ಕೆ 619 ಅಂಕ ಪಡೆದಿರುವ ಮಡಿಕೇರಿ ಸಂತ ಮೈಕಲರ ಪ್ರೌಢಶಾಲೆಯ ನಿಸರ್ಗಾ ರೈ, ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಪ್ರೌಢ ಶಾಲೆಯ ಕೆ.ಕೆ. ಇಂಚರ ಸೋಮವಾರಪೇಟೆ ವಿಶ್ವಮಾನವ ಕುವೆಂಪು ಪ್ರೌಢ ಶಾಲೆಯ ಸಿ.ಎಸ್. ತೆಜಸ್ವಿನಿ ಹಾಗೂ ಇದೇ ಶಾಲೆಯ ಸಿ.ಎಸ್. ಆದ್ವಿ ಕೊಡಗಿಗೆ ಮೂರನೇ ಸ್ಥಾನ ಗಳಿಸಿದ್ದಾರೆ.

11 ಸರ್ಕಾರಿ ಶಾಲೆಗಳು ಮತ್ತು 15 ಅನುದಾನರಹಿತ ಶಾಲೆಗಳಲ್ಲಿ ಶೇ. 100ರ ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ ಎ ಪ್ಲಸ್ 468, ಎ 944, ಬಿ ಪ್ಲಸ್ 1,166, ಬಿ. 1,342, ಸಿಪ್ಲಸ್ 1,030 ಹಾಗೂ ಸಿ ದರ್ಜೆಯಲ್ಲಿ 192 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net