ಎಸ್.ಎಸ್.ಕೆ ಮಹಿಳಾ ಮಂಡಳವತಿಯಿ೦ದ ಕುಂಕುಮಾರ್ಚನೆ ಕಾರ್ಯಕ್ರಮ

f0d53e24-870f-4d0c-bd5b-7cbcbae7fd8b
Published on

ಗದಗ: ಎಸ್.ಎಸ್.ಕೆ. ಶ್ರೀ ಜಗದಂಬಾ ಮಹಿಳಾ ಮಂಡಳ ಗದಗ ವತಿಯಿಂದ ಮುಳಗುಂದ ನಾಕಾದಲ್ಲಿರುವ ಶ್ರೀ ವಿಠ್ಠಲಾರೂಡ ಮಠದಲ್ಲಿ ಅಯೋದ್ಯಯ ಶ್ರೀ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ನಿಮಿತ್ಯ ರಾಮತಾರಕ ಹೋಮ, ನವಗೃಹ ಹೋಮ, ಸಂತ ಮಂಡಳಿಯಿ೦ದ ಭಜನೆ, ಲಲಿತಾ ನಾಮ ಸ್ತೋತ್ರ ಪಠಣದೊಂದಿಗೆ ಕುಂಕುಮಾರ್ಚನೆಯನ್ನು ಶ್ರೀಮತಿ ಅಶ್ವಿನಿ ಖಟವಟೆ ಅವರಿಂದ ಅತ್ಯಂತ ವಿಜ್ರಂಭಣೆಯಿ೦ದ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಸುಮಾರು ೩೦೦ ಮಹಿಳೆಯರು ಭಾಗವಹಿಸಿದ್ದರು. ಗೌರಂಗಿ ಮಾತಾ ಇವರಿಂದ ಕೀರ್ತನೆ ನಡೆಯಿತು. ಗೌರಂಗಿ ಮಾತಾರವರನ್ನು ಹಾಗೂ ಶ್ರೀಮತಿ ಅಶ್ವಿನಿ ಖಟವಟೆಯವರನ್ನು ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ರೇಖಾ ಖಟವಟೆಯವರು ಸನ್ಮಾನಿಸಿದರು. ಈ ಕರ‍್ಯಕ್ರಮದಲ್ಲಿ ಪಂಚ ಕಮೀಟಿ ಸದಸ್ಯರು, ತರುಣ ಸಂಘ, ಸಮಸ್ತ ಸಮಾಜ ಭಾಂದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net