ದುರ್ಗಾದೇವಿ ಗುಡಿಯಲ್ಲಿ ವಕೀಲರಿಗೆ ಸನ್ಮಾನ

IMG_20231019_205823_122-2.jpg
Published on

ಹುಬ್ಬಳ್ಳಿ: ಸರ್ಕಾರಿ ಅಭಿಯೋಜಕರಾಗಿ ಮುಂಬಡ್ತಿ ಹೊಂದಿರುವ ವಕೀಲರಾದ ಗುರುಶಾಂತಯ್ಯ ಕುರುಡಿಕೇರಿಮಠ ಹಾಗೂ ಶ್ರೀಕಾಂತ ದಯಣ್ಣವರ ಅವರನ್ನು ಇಲ್ಲಿಯ ದಾಜಿಬಾನಪೇಟ ಎಸ್.ಎಸ್.ಕೆ. ಪಂಚ ಟ್ರಸ್ಟ್ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಸತ್ಕರಿಸಲಾಯಿತು.

ಪವಿತ್ರ ದಸರಾ ನಿಮಿತ್ತ ಶ್ರೀದೇವಿಯರ ದರ್ಶನ ಪಡೆದ ಇವರನ್ನು ಕಮಿಟಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಕಾಂತ ದಯಣ್ಣವರ ಇವರು, ದಾಜಿಬಾನಪೇಟೆಯು ದೇವಸ್ಥಾನಗಳ ಸಂಗಮವಾಗಿದ್ದು, ಧಾಮಿರ್ಕ ಕೇಂದ್ರವಾಗಿ ಪ್ರಸಿದ್ಧಿ ಹೊಂದಿದೆ. ಇಲ್ಲಿ ಬಂದು ಎಲ್ಲ ದೇವರುಗಳ ದರ್ಶನ ಪಡೆಯುವ ಸೌಭಾಗ್ಯ ಸಿಕ್ಕಿದೆ ಎಂದು ಹೇಳಿದರು.

ಗುರುಶಾಂತಯ್ಯ ಕುರಡಿಕೇರಿಮಠ ಮಾತನಾಡಿ, ಶಕ್ತಿ ದೇವತೆ ಹಾಗೂ ಗ್ರಾಮದೇವತೆ ದುರ್ಗಾದೇವಿ ಮಾತೆಯ ಭಕ್ತರಾದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಜನಾಂಗದವರು, ಯಾವತ್ತು ಧರ್ಮದ ರಕ್ಷಣೆಗಾಗಿ ಕೆಲಸ ಮಾಡುತ್ತ ಬಂದಿದ್ದಾರೆ ಎಂದರು.

ಪಂಚ ಟ್ರಸ್ಟ್ ಕಮಿಟಿಯ ನೀಲಕಂಠ ಜಡಿ, ಗೌರವ ಕಾರ್ಯದಶಿರ್ ಭಾಸ್ಕರ ಜಿತೂರಿ, ಕೋಶಾಧಿಕಾರಿ ಅಶೋಕ ಕಲಬುಗಿರ್, ಎನ್.ಆರ್. ಹಬೀಬ, ಲಕ್ಷ್ಮಣಸಾ ಪೂಜಾರಿ, ಮಂಜುನಾಥ ಪೂಜಾರಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net