

ಹುಬ್ಬಳ್ಳಿ: ತಮ್ಮ ಅನುದಾನದಲ್ಲಿ ಸಮಾಜದ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ನೇತೃತ್ವದಲ್ಲಿ ಎಸ್ಎಸ್ ಕೆ ಸಮಾಜದ ಪ್ರಮುಖರು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರಿಗೆ ಮನವಿ ಸಲ್ಲಿಸಿದರು.
ಎಸ್ ಎಸ್ ಕೆ ಸಮಾಜದ ವಿಶ್ವೇಶ್ವರ ನಗರ ಪಂಚ ಟ್ರಸ್ಟ್ ಕಮಿಟಿ, ರಾಜಧಾನಿ ಕಾಲನಿ, ಗೋಕುಲ ರೋಡ್, ಇಂಡಸ್ಟ್ರಿಯಲ್, ಲೋಹಿಯಾನಗರ ಪಂಚ ಟ್ರಸ್ಟ್ ಹಾಗೂ ಸಮಾಜದ ಕಾಲೇಜು ಸೇರಿ ವಿವಿಧ ಸಂಸ್ಥೆಗಳ ಕಟ್ಟಡ ಕಾಮಗಾರಿಗೆ ಅನುದಾನ ನೀಡಬೇಕೆಂದು ಕೋರಲಾಯಿತು.
ಮಾಜಿ ಶಾಸಕ ಅಶೋಕ ಕಾಟವೆ, ಎಸ್ ಎಸ್ ಕೆ ಬ್ಯಾಂಕ್ ಚೇರ್ಮನ್ ವಿಠಲಸಾ ಲದವಾ, ಕೇಂದ್ರ ಪಂಚ ಟ್ರಸ್ಟ್ ಕಮಿಟಿಯ ನೀಲಕಂಠಸಾ ಜಡಿ ಅವರ ಉಪಸ್ಥಿತಿಯಲ್ಲಿ ಮನವಿ ನೀಡಲಾಯಿತು. ಸಮಾಜದ ವಿವಿಧ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.