

ಹುಬ್ಬಳ್ಳಿ: ಇಲ್ಲಿಯ ಎಸ್ಎಸ್ಕೆ ಸಮಾಜದ ತುಳಜಾಭವಾನಿ ದೇವಸ್ಥಾನಕ್ಕೆ ನವರಾತ್ರಿ ಹಿನ್ನೆಲೆಯಲ್ಲಿ ಭೇಟಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ ಅವರು ವಿಶೇಷ ಪೂಜೆ ಸಲ್ಲಿಸಿದರು.
ನಂತರ ಬಡ ಜನರಿಗೆ ಸಮಾಜದ ವತಿಯಿಂದ ದವಸ ಧಾನ್ಯ ವಿತರಿಸಲು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ದಸರಾ ಹಬ್ಬದ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಸ್ಎಸ್ಕೆ ಸಮಾಜವು ಯಾವತ್ತು ಸಮಾಜ ಸೇವೆ ಹಾಗೂ ಜನಪರ ಕೆಲಸಗಳನ್ನು ಮಾಡುತ್ತ ಬಂದಿದೆ. ಸಮಾಜದ ಸೇವಾ ಗುಣ ಮೆಚ್ಚುವಂತದ್ದು ಎಂದು ಹೇಳಿದರು.
ಸಮಾಜದ ಅಧ್ಯಕ್ಷ ಸತೀಶ ಮೆಹರವಾಡೆ, ಮಾಜಿ ಶಾಸಕ ಅಶೋಕ ಕಾಟವೆ, ರಂಗಾ ಬದ್ದಿ, ವಿಠ್ಠಲ ಲದವಾ, ಶ್ರೀಕಾಂತ ಬದ್ದಿ, ಡಿ.ಕೆ. ಚೌಹಾಣ, ಭಾಸ್ಕರ ಜಿತೂರಿ, ಲಕ್ಷ್ಮಣ ದಲಬಂಜನ, ದೇವದಾಸ ಹಬೀಬ, ದೀಪಕ ಜಿತೂರಿ, ಪ್ರವಿಣ ಪವಾರ, ಉಪಸ್ಥಿತರಿದ್ದರು.