ಎಎಸ್​ಎಸ್​ ಕಾಲೇಜಿನ ಎನ್​ಎಸ್​ಎಸ್​ ದಿಂದ ದತ್ತು ಗ್ರಾಮದಲ್ಲಿ ವನಮಹೋತ್ಸವ

Oplus_131072
Oplus_131072
Published on

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಆದರ್ಶ ಶಿಕ್ಷಣ ಸಂಸ್ಥೆಯಿಂದ ಅಂತೂರು ಬೆಂತೂರು ಗ್ರಾಮದಲ್ಲಿ ಬುಧವಾರ ವನಮಹೋತ್ಸವ ಕಾರ್ಯಕ್ರಮ ಜರುಗಿತು.
ಎಸ್​ಡಿಎಂಸಿ ಅಧ್ಯಕ್ಷ ಬಿ. ಎ ಮನಕವಾಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಾಚಿನ ಕಾಲದಿಂದಲೂ ಭಾರತ ದೇಶದಲ್ಲಿ ಮರ ಗಿಡಗಳಿಗೆ ವಿಶೇಷ ಪ್ರಾಶಸ, ಮನ್ನಣೆ ನೀಡಲಾಗುತ್ತಿದೆ. ದೇವತೆಗಳು, ನೀರು, ಸಸ್ಯಗಳು, ಅರಣ್ಯ ವೃಕ್ಷಗಳು ನಮ್ಮ ಪ್ರಾರ್ಥನೆಯನ್ನು ಮನ್ನಿಸಲಿ. ಅವರ ಅನುಗ್ರಹ ನಮ್ಮನ್ನು ಸದಾ ರಕ್ಷಿಸಲಿ -ಎಂದು ಭಾರತದ ಋಷಿಮುನಿಗಳು ಪ್ರಾಥಿರ್ಸುತ್ತಿದ್ದರು. ವೃಕ್ಷಗಳನ್ನು ದೇವರ ಸಮಾನ ಎಂದು ಆರಾಧಿಸುತ್ತಿದ್ದರು. ಇಂದಿಗೂ ಅಶ್ವತ್ಥ, ಬನ್ನಿ, ಎಕ್ಕ ಇತ್ಯಾದಿ ಗಿಡ ಮರಗಳನ್ನು ಪೂಜಿಸುವುದನ್ನು ನಾವು ಕಾಣಬಹುದು ಎಂದರು.
ಎನ್​ಎಸ್​ಎಸ್​ ಕಾರ್ಯಕ್ರಮ ಅಧಿಕಾರಿ ಪ್ರೊ. ಬಿ. ಪಿ. ಜೈನರ ಮಾತನಾಡಿ, ವರ್ಷಕ್ಕೆ ಒಮ್ಮೆ ವಾಷಿರ್ಕ ಶಿಬಿರಗಳನ್ನು ಮಾಡುವ ಮೂಲಕ ದತ್ತು ಗ್ರಾಮಗಳನ್ನು ಸ್ವೀಕರಿಸುವ ಬದಲು ಇಡೀ ವರ್ಷವೂ ಆ ಗ್ರಾಮಕ್ಕೆ ಶಾಲೆಗೆ ಪರಿಸರ ಆರೋಗ್ಯ ಶಿಕ್ಷಣ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ದನಕರುಗಳ ಮೇವಿಗೆ ಭೂಮಿ ಸಾಲದಾಯಿತು. ಕಾಡು ಪ್ರದೇಶ ಕ್ರಮೇಣ ಕಡಿಮೆ ಆಯಿತು. ಮರಗಳನ್ನು ಉರುವಲಿಗಾಗಿ ಮರದ ಸಾಮಾನು ಮತ್ತಿತರ ವಸ್ತುಗಳಿಗಾಗಿ ಮನೆ ಇತ್ಯಾದಿ ಕಟ್ಟುವುದಕ್ಕಾಗಿ ಕಡಿಯುವುದು ಪ್ರಾರಂಭವಾಯಿತು. ಆದರೆ ಕಡಿದ ಮರಕ್ಕೆ ಸಮನಾಗಿ ಮರಗಳನ್ನು ಬೆಳೆಸುವ ಪ್ರವೃತ್ತಿ ಜನರಲ್ಲಿ ಇಲ್ಲದಂತಾಯಿತು. ಹೊಸದಾಗಿ ಸಸಿಗಳನ್ನು ನೆಟ್ಟು ಅರಣ್ಯವನ್ನು ಬೆಳೆಸುವುದರಿಂದ, ಪರಿಸರ ಮಾಲಿನ್ಯವನ್ನು ತಡೆಯುವುದರ ಅಗತ್ಯ ಜನರಲ್ಲಿ ಕಂಡುಬಂದಿತು ಎಂದರು.
ಸಂತೋಷ ಮನಕವಾಡ, ಬಸುವರಾಜ ಜೈನರ, ಮನೋಜ ಬಂಜನ, ಶಿವಯೋಗಿ ಗಡ್ಡದ್ಮಠ, ಆದರ್ಶ ಅಕ್ಕಿ, ಶಶಾಂಕ, ಸಂಗಮೇಶ, ಮೇ, ರಂಜಿತ, ವರ್ಷ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net