

ಗದಗ : ಎಸ್‌ಎಸ್‌ಕೆ ಸಮಾಜವು ಅತೀ ಹೆಚ್ಚು ದೇಶಪ್ರೇಮ ಹೊಂದಿದ ಸಮಾಜವಾಗಿದೆ. ಈ ಸಮಾಜವು ರಾಷ್ಟçಪ್ರೇಮ, ನೇಕಾರಿಕೆ, ವ್ಯಾಪಾರ, ಮುದ್ರಣ, ಹೋಟೆಲ್ ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ನಿಷ್ಠೆ ಮತ್ತು ಶಿಸ್ತಿನಿಂದ ಕಾರ್ಯನಿರ್ವಹಿಸುವ ಮೂಲಕ ತಮ್ಮದೆಯಾದ ವಿಶೇಷ ಛಾಪನ್ನು ಮೂಡಿಸಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಅವರು ಹೇಳಿದರು.
ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರಬಾರ ವೇದಿಕೆಯಲ್ಲಿ ಜರುಗಿದ “ನಮ್ಮೂರು ದಸರಾ-೨೦೨೪” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿ, ಎಸ್.ಎಸ್.ಕೆ ಸಮಾಜವು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗದೆ ಪಕ್ಷಾತೀತವಾಗಿ ಎಲ್ಲ ಸಮಾಜಗಳಿಗೆ ಗೌರವ ನೀಡುತ್ತಾ ಬಂದಿದೆ. ಎಸ್‌ಎಸ್‌ಕೆ ಸಮಾಜ ಬಾಂಧವರು ದಸರಾ ಮಹೋತ್ಸವವನ್ನು ಗದಗ-ಬೆಟಗೇರಿ ಅವಳಿ ನಗರದ ಜನತೆ ಮೆಚ್ಚುವಂತೆ ಮಾದರಿಯಾಗಿ ಮಾಡಿದ್ದಾರೆ ಎಂದು ಹೇಳಿದರು. ಇದಕ್ಕೂ ಮುನ್ನ ಅವರು ಶ್ರೀ ಜಗದಂಬಾ ದೇವಿ ಹಾಗೂ ಶ್ರೀ ತುಳಜಾಭವಾನಿ ದೇವಿಯ ದರ್ಶನ ಪಡೆದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಗರದ ಉಸಿರು ಪೌಂಡೇಶನಿನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಎನ್.ಡಬ್ಲೂ.ಕೆ. ಎಸ್. ಆರ್.ಟಿ.ಸಿ. ಮಾಜಿ ನಿರ್ದೇಶಕ ಶರಣ್ ಪಾಟೀಲ ಅವರು ಮಾತನಾಡಿ, ನಾನು ಎಲ್ಲ ಸಮಾಜ ಬಾಂಧವರನ್ನು ಹತ್ತಿರದಿಂದ ನೋಡಿದ್ದೆನೆ ಅವರಲ್ಲಿ ಎಸ್‌ಎಸ್‌ಕೆ ಸಮಾಜ ಬಾಂಧವರು ಶ್ರಮಜೀವಿಗಳು, ಸ್ವಉದ್ಯೋಗದಲ್ಲಿ ಸಂತೃಪ್ತಿ ಕಾಣುವ ಮೂಲಕ ಸದೃಡ ಸಮಾಜಕ್ಕೆ ಶಕ್ತಿ ತುಂಬುತ್ತಿದ್ದಾರೆ. ಸರಕಾರಿ ನೌಕರಿಯ ಕನಸು ಕಾಣುವ ಜನರಿಗೆ ಸ್ವಉದ್ಯೋಗದಿಂದ ಸ್ವಾವಲಂಬಿಯಾಗಿ ಬದುಕಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಎಸ್.ಎಸ್.ಕೆ ಸಮಾಜ ಪಂಚ ಕಮೀಟಿ ಅಧ್ಯಕ್ಷ ಫಕೀರಸಾ ಬಾಂಡಗೆ ಅವರು ವಹಿಸಿದ್ದರು. ವೇದಿಕೆ ಮೇಲೆ ಅತಿಥಿಗಳಾಗಿ ಬೆಂಗಳೂರಿನ ಉದ್ಯಮಿ ವಿಠ್ಠಲಸಾ ನಗರಿ, ಪಂಚ ಕಮೀಟಿಯ ಉಪಾಧ್ಯಕ್ಷ ರಾಜು ಬದಿ, ಗೌರವ ಕಾರ್ಯದರ್ಶಿ ವಿನೋಧ ಶಿದ್ಲಿಂಗ, ರವಿ ಶಿದ್ಲಿಂಗ, ದಸರಾ ಕಮೀಟಿಯ ಚೇರಮನ್‌ರಾದ ವಿಷ್ಣುಸಾ ಶಿದ್ಲಿಂಗ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಂಚ ಕಮೀಟಿಯ ಸದಸ್ಯರಾದ ಸುರೇಶಕುಮಾರ ಬದಿ, ಮಾರುತಿ ಪವಾರ, ಮೋತಿಲಾಲಸಾ ಪೂಜಾರಿ, ಪರಶುರಾಮಸಾ ಬದಿ, ವಿನೋಧ ಬಾಂಡಗೆ, ಪ್ರಕಾಶ ಬಾಕಳೆ, ಅಂಬಾಸಾ ಖಟವಟೆ, ವಾಸುದೇವಸಾ ಖಟವಟೆ, ಮೋಹನಸಾ ಪವಾರ, ವಿಶ್ವನಾಥಸಾ ಸೂಳಂಕಿ, ಸಾಗರ ಪವಾರ, ಸತೀಶ ದೇವಳೆ, ರಾಘವೇಂದ್ರ ಬಾಂಡಗೆ, ಆನಂದ ಖಟವಟೆ, ಶಂಕರ ಬದಿ, ನಾಗರಾಜ ಖೋಡೆ, ಉಮಾಬಾಯಿ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ, ಭಾವನಾ ಭಾಂಡಗೆ, ಗೀತಾಬಾಯಿ ಹಬೀಬ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಜಿ.ಎನ್.ಹಬೀಬ ನಿರೂಪಿಸಿದರು. ಶ್ರೀಕಾಂತ ಬಾಕಳೆ ವಂದಿಸಿದರು