

ವಿಜಯವಾಣಿ ಸುದ್ದಿಜಾಲ ಗದಗ
ಎಸ್.ಎಸ್.ಕೆ.ಸಮಾಜವು ಸರ್ವಧರ್ಮ ಸಮನ್ವಯತೆ, ಆತ್ಮೀಯತೆ ಹಾಗೂ ಭಾತೃತ್ವಕ್ಕೆ ಪಾತ್ರವಾಗಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು.
ನಗರದ ಹಳೇ ಸರಾ ಬಜಾರದ ಜಗದಂಭಾ ದೇವಸ್ಥಾನದ ಬಾಸ್ಕರಸಾ ಪವಾರ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ನಮ್ಮೂರ ದಸರಾ ದರ್ಬಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಚ್ಚುಕಟ್ಟಾದ ವ್ಯವಸ್ಥೆ, ದಸರಾ ಆಚರಣೆಯಿಂದ ಮನಸೂರೆಗೊಂಡಿದೆ. ಮೈಸೂರು ದಸರಾದಲ್ಲಿ ಬಾಗಿಯಾದಷ್ಟು ಸಂತಸವಾಗಿದೆ. ಇಂತಹ ಅವಕಾಶ ಕಲ್ಪಿಸಿದ ತಮ್ಮೆಲ್ಲರಿಗೂ ನಾನು ಚಿರಋಣಿ ಎಂದರು.
ಬೆಂಗಳೂರಿನ ಸಿಐಡಿಯ ಕಾನೂನು ಸಲಹೆಗಾರ ಮಹೇಶ ವೈದ್ಯ ಮಾತನಾಡಿ, ನವರಾತ್ರಿ ಹಬ್ಬ ಇರುವುದು ರಾಷ್ಟ್ರಧರ್ಮ ಗಟ್ಟಿಗೊಳಿಸುವದ್ದಕ್ಕಾಗಿ ಮತ್ತು ಹಿಂದೂ ಹಬ್ಬಗಳು ಸನಾತನ ಧರ್ಮದ ಗಟ್ಟಿ ಬೇರುಗಳಾಗಿವೆ. ಇಂತಹ ಹಬ್ಬಗಳಲ್ಲಿ ಮಹಿಳೆಯರಿಗೆ ಲಲತಸಹಸ್ರನಾಮ ಹಾಗೂ ಯುವಕರಿಗೆ ಭಕ್ತಿಯೋಗ, ಧ್ಯಾನ ಯೋಗ, ಭಜನೆ ಹಾಗೂ ಭಗವದ್ಗೀತೆ ಹೇಳಿಕೊಡಬೇಕು. ಧರ್ಮ ಉಳಿಯಲು ಇವುಗಳು ಮುಖ್ಯವಾಗಿವೆ ಎಂದು ಹೇಳಿದರು.
ಎಸ್ಎಸ್ಕೆ ಸಮಾಜದ ಅಧ್ಯ ಕೀರಸಾ ಬಾಂಡಗೆ ಅಧ್ಯತೆ ವಹಿಸಿದ್ದರು. ವೇದಿಕೆ ಮೇಲೆ ಎಸ್ಎಸ್ಕೆ ಸಮಾಜದ ಉಪಾಧ್ಯ ರಾಜು ಬದಿ, ಗೌರವ ಕಾರ್ಯದಶಿರ್ ವಿನೋದ ಶಿದ್ಲಿಂಗ, ಸಹಕಾರ್ಯದಶಿರ್ ರವಿ ಶಿದ್ಲಿಂಗ, ದಸರಾ ಕಮೀಟಿ ಚೇರಮನ್ ವಿನೋದ ಬಾಂಡಗೆ, ವಿಷ್ಣುಸಾ ಶಿದ್ಲಿಂಗ ಉಪಸ್ಥಿತರಿದ್ದರು.