

ರಂಗಪಟ್ಟಣ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಚಂದ್ರವನ ಆಶ್ರಮದಲ್ಲಿ ಮೇ 14ರಂದು ಹತ್ತನೇ ಬೃಹತ್ ಯೋಗೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.
ಭಾರತ ಮೂಲದ ಯೋಗ ಪ್ರಸ್ತುತ ವಿಶ್ವದ 176 ದೇಶಗಳಲ್ಲಿ ಪ್ರಖ್ಯಾತಿಗಳಿಸಿದೆ. ಇದು ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯ ವೈಭವಕ್ಕೆ ಸಾಕ್ಷಿಯಾಗಿದೆ ಎಂದು ಪಟ್ಟಣ ಹೊರವಲಯದ ಪೂರ್ವವಾಹಿನಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಗಾಗಿ ಮೇ 14ರಂದು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿವಿ, ತ್ರಿನೇತ್ರ ಇಂಟರ್ ನ್ಯಾಷನಲ್ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಮೈಸೂರಿನ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಸಹಯೋಗದೊಂದಿಗೆ ಕಾವೇರಿ ತಟದ ಶ್ರೀ ಮಠದ ಆವರಣದಲ್ಲಿ ಯೋಗೋತ್ಸವ ಆಚರಿಸಲಾಗುತ್ತಿದೆ ಎಂದು ವಿವರಿಸಿದರು. ಮೈಸೂರಿನ ಜಿಎಆರ್‌ಸಿ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ ಮಾತನಾಡಿ, ಚಂದ್ರವನ ಆಶ್ರಮದಂತಹ ಪ್ರಕೃತಿ ಮಡಿಲಲ್ಲಿ ಆಯೋಜಿಸಲಾಗಿರುವ ಯೋಗೋತ್ಸವವನ್ನುಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಲಿದ್ದಾರೆ ಎಂದರು.
ಸಂಸ್ಕೃತ ವಿವಿ ಕುಲಸಚಿವ ಪ್ರೊ. ಗಿರೀಶ ಚಂದ್ರ, ಪ್ರಾಧ್ಯಾಪಕ ಜಯರೇವಣ್ಣ ,ವಿದ್ವಾನ್ ಶಿವಮೂರ್ತಿ ಇದ್ದರು.