40 ವರ್ಷಗಳ ಸೇವೆ ಸಂತೃಪ್ತಿ ನೀಡಿದೆ

Published on

ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಮಕೃಷ್ಣೇಗೌಡ ಅಭಿಮತ

* ಅಭಿನಂದನಾ ಕಾರ್ಯಕ್ರಮ

ಶ್ರೀರಂಗಪಟ್ಟಣ : ಸರ್ಕಾರಿ ಸೇವೆಯಲ್ಲಿ 40 ವರ್ಷಗಳ ಕಾಲ ಕೆಲಸ ನಿರ್ವಹಣೆ ಮಾಡಿರುವುದು ಸಂತೃಪ್ತಿ ನೀಡಿದೆ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಮಕೃಷ್ಣೇಗೌಡ ತಿಳಿಸಿದರು. ಪಟ್ಟಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗೀಯ ಕಚೇರಿಯಲ್ಲಿ ಸಿಬ್ಬಂದಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಂಚಾಯತ್ ರಾಜ್, ನೀರಾವರಿ, ಸಣ್ಣ ನೀರಾವರಿ ಸೇರಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ವಿವಿಧೆಡೆ ಕೆಲಸ ಮಾಡಿದ್ದೇನೆ. ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಶ್ರಮಿಸಿದ್ದೇನೆ. ತಾಲೂಕಿನ ಗಾಮನಹಳ್ಳಿ ಹಾಗೂ ಮಹದೇವಪುರ ಬಹುಗ್ರಾಮಗಳ ಕುಡಿಯುವ ನೀರು ಯೋಜನೆ ಜಾರಿ, ಎಡದಂಡೆ ಮತ್ತು ಬಲದಂಡೆಗಳ ನಿರ್ವಹಣೆ ಕೆಲಸಗಳು ಖುಷಿ ನೀಡಿವೆ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾಜಿ ವ್ಯವಸ್ಥಾಪಕ ಇ.ಎಸ್ ನಾಗರಾಜು ಮಾತನಾಡಿ, ಸೇವಾ ಅವಧಿಯಲ್ಲಿ ರಾಮಕೃಷ್ಣೇಗೌಡರು ನಿರ್ವಹಿಸಿರುವ ಯೋಜನೆಗಳು ಸರ್ವಕಾಲಕ್ಕೂ ಸ್ಮರಿಸುವಂಥವುಗಳಾಗಿವೆ ಎಂದರು.

ಮಧುಮಾಲತಿ ರಾಮಕೃಷ್ಣೇಗೌಡ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ನೆಲಮನೆ ಚೆಲುವೇಗೌಡ, ಮುಖಂಡ ದರಸಗುಪ್ಪೆ ಸುರೇಶ್, ಟಿ.ಎಂ.ಹೊಸೂರು ಗವಿಗೌಡ, ಕಾರ್ಯಪಾಲಕ ಇಂಜಿನಿಯರ್ ಪ್ರಮೋದ್ ಕುಮಾರ್, ಇಂಜಿನಿಯರ್‌ಗಳಾದ ರಾಕೇಶ್, ಪ್ರತಾಪ್, ಸಂತೋಷ್ ನಾಯಕ್, ಎಇಇ ಗಳಾದ ರಮ್ಯಾ, ಮಮತಾ, ರಶ್ಮಿ, ಅರ್ಚನಾ, ನಾಗರಾಜು, ಮಹದೇವಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net