ಅಭಿವೃದ್ಧಿಗೆ ಶ್ರಮಿಸಿದ ಎಸ್‌ಆರ್‌ಕೆ

SRK worked hard for development
ಹುನಗುಂದ ತಾಲೂಕಿನ ಹಾವರಗಿ ಗ್ರಾಮದ ಎಸ್‌ಎಂಎಸ್ ಪ್ರೌಢಶಾಲೆ ಆವರಣದಲ್ಲಿ ಎಸ್.ಆರ್. ಕಾಶಪ್ಪನವರ 23ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ, ಉಜ್ಜಯನಿ ಮಹಾಪೀಠದ ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ, ಕಾಶಿ ಮಹಾಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಪೂಜ್ಯರು ಉದ್ಘಾಟಿಸಿದರು.
Published on

ಹುನಗುಂದ: ಎಸ್.ಆರ್. ಕಾಶಪ್ಪನವರ ತಮ್ಮ ಜೀವನವನ್ನು ಜನರ ಕಲ್ಯಾಣ, ಧರ್ಮ, ಪರಂಪರೆ, ಹುನಗುಂದ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಶ್ರೀಶೈಲ ಮಹಾಪೀಠದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ತಾಲೂಕಿನ ಹಾವರಗಿ ಗ್ರಾಮದಲ್ಲಿ ಎಸ್‌ಎಂಎಸ್ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಎಸ್.ಆರ್. ಕಾಶಪ್ಪನವರ ಸ್ಮಾರಕ ಪ್ರತಿಷ್ಠಾನ ವತಿಯಿಂದ ಕಾಶಪ್ಪನವರ 23ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಕಾಶಪ್ಪರವರು ರೈತರ ಕೃಷಿ ವ್ಯವಸ್ಥೆಗೆ ಆತಂಕ ಬಂದಾಗ ಅಣೆಕಟ್ಟಿನ ಗೇಟ್ ಅನ್ನು ತೆಗೆದು ನೀರು ಬಿಟ್ಟಿದ್ದಾರೆ. ಈ ಇತಿಹಾಸವನ್ನು ಮರೆಯಲಾಗದು ಎಂದರು.

ಕಾಶಿ ಮಹಾಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಮಾತನಾಡಿ, ಎಸ್.ಆರ್. ಕಾಶಪ್ಪನವರ ಬಡ ರೈತ ಕುಟುಂಬದಲ್ಲಿ ಜನಿಸಿದ ಅವರು ಸಿಕ್ಕಂಥ ರಾಜಕೀಯ, ಸಾಮಾಜಿಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು ಎಂದು ಹೇಳಿದರು.

ಉಜ್ಜಯನಿ ಮಹಾಪೀಠದ ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಮಾತನಾಡಿ, ಜನಾನುರಾಗಿ, ಮುತ್ಸದಿ ನಾಯಕ, ಎಸ್.ಆರ್. ಕಾಶಪ್ಪನವರು ಅವರು ನಿಧನರಾಗಿ 23 ವರ್ಷವಾದರೂ ಸಮಾಜಕ್ಕಾಗಿ ಶೈಕ್ಷಣಿಕ, ಧಾರ್ಮಿಕ ಕಾರ್ಯಗಳು ಶರೀರ ಅಳೆದರೂ ಕೆಲಸ ಎಂದೆಂದಿಗೂ ಅಳಿಯಲಾರದು ಎಂದರು.

ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಮ್ಮ ತಂದೆಯವರ 23 ವರ್ಷಗಳಿಂದ ನಿರಂತರ ಪುಣ್ಯ ಸ್ಮರಣೆಯನ್ನು ಪಂಚಪೀಠಗಳ ಜಗದ್ಗುರುಗಳ ಸಮ್ಮುಖದಲ್ಲಿ ನಡೆದುಕೊಂಡು ಬಂದಿದೆ. ನಮ್ಮ ಕುಟುಂಬದ ಮೇಲೆ ಪಂಚಪೀಠಗಳ ಆರ್ಶೀವಾದ ಇದೆ. ಉಸಿರು ಇರುವವರೆಗೂ ಈ ಪುಣ್ಯಸ್ಮರಣೆ ನಡೆಯುತ್ತದೆ. ಹಿಂದಿನ ಅವಧಿಯಲ್ಲಿ ಹುನಗುಂದ ಮತಕ್ಷೇತ್ರದಲ್ಲಿ ಜನರಿಗೆ ಶಿಕ್ಷಣಕ್ಕೆ ಹೆಚ್ಚಿನ ಶಾಲೆಗಳನ್ನು ನಿರ್ಮಾಣ ಮಾಡಿದ್ದಾರೆ. ರಾಮಥಾಳ- ಮರೋಳ ಏತ ನೀರಾವರಿಗೆ ಜಾರಿಗೆ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದರು.

ಮಹಾಂತೇಶ ಅವಾರಿ, ವಿಜಯ ಗದ್ದನಕೇರಿ, ಎಸ್.ಕೆ. ಕೊನೆಸಾಗರ ಪ್ರಾಸ್ತಾವಿಕ ಮಾತನಾಡಿದರು.

ಕಲ್ಲಿನಾಥ ಸ್ವಾಮಿಗಳು, ನಂದವಾಡಗಿಯ ಮಹಾಂತಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಗಿರಿಸಾಗರದ ರುದ್ರಮುನಿ ಶಿವಾಚಾರ್ಯ, ಬಿಲ್ ಕೆರೂರಿನ ಸಿದ್ಧಲಿಂಗ ಸ್ವಾಮಿಗಳು, ಸಿದ್ದನಕೊಳ್ಳದ ಶಿವಕುಮಾರ ಸ್ವಾಮಿಗಳು, ತಂಗಡಗಿಯ ಬಸವಪ್ರಿಯ ಅನ್ನದಾನಿ ಭಾರತಿ ಸ್ವಾಮಿಗಳು, ಗಚ್ಚಿನಮಠದ ಅಮರೇಶ್ವರ ದೇವರು ಸೇರಿದಂತೆ ವಿವಿಧ ಮಠಾಧೀಶರು ಇದ್ದರು.

ಮಾಜಿ ಶಾಸಕ ಗೌರಮ್ಮ ಕಾಶಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ದೇವಾನಂದ ಕಾಶಪ್ಪನವರ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಗಂಗಾಧರ ದೊಡಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net