

ಗೋಕರ್ಣ: ಶ್ರೀ ರಾಮಚಂದ್ರಾಪುರ ಮಠದ ಮೂಲತಾಣ ಅಶೋಕೆಯಲ್ಲಿ 32ನೆ ಸ್ವಭಾಷಾ ಚಾತುರ್ಮಾಸ್ಯ ವ್ರತ ಶುಭಾರಂಭ ನಿಮಿತ್ತ ಗುರುವಾರ ಪೌರ್ಣಿಮೆ ಪ್ರಾತಃ ಕಾಲದಲ್ಲಿ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಶ್ರೀಕರಾರ್ಚಿತ ವಿವಿಧ ದೇವತಾ ಪೂಜೆಯೊಂದಿಗೆ ಶ್ರೀವ್ಯಾಸ ಪೂಜೆ ಕೈಗೊಂಡರು.
ವ್ರತಗ್ರಹಣ ಮಾಡಿದ ಶ್ರೀಗಳು ಮಧ್ಯಾಹ್ನ ನಡೆದ ಧರ್ಮಸಭೆಯಲ್ಲಿ ಶ್ರೀವ್ಯಾಸ ಪೀಠಾರೋಹಣ ಮಾಡಿ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಶಿಷ್ಯಭಕ್ತರನ್ನು ಅನುಗ್ರಹಿಸಿದರು. ಭಕ್ತರು ಫಲ ಸಮರ್ಪಣೆ ಮಾಡಿದರು. ಶ್ರೀಮಠದ ವತಿಯಿಂದ ಎಲ್ಲರಿಗೂ ಪಂಚಗವ್ಯ ಮತ್ತು ತೀರ್ಥ ವಿತರಣೆ ಮಾಡಲಾಯಿತು.