

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಕಾಲಜ್ಞಾನಿ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿಗಳ ದೇಗುಲದಲ್ಲಿ ಕಲ್ಯಾಣ ಮಹೋತ್ಸವ ಮತ್ತು ಧಾರ್ಮಿಕ ಸಭೆ ಬುಧವಾರ ಜರುಗಿತು.
ದೇಗುಲದ ಶ್ರೀವೀರಬ್ರಹ್ಮೇಂದಸ್ವಾಮಿ ಪರಿವಾರದ ಮೂರ್ತಿಗಳಿಗೆ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ, ಮಹಾಸಂಕಲ್ಪ, ಕಲ್ಯಾಣಮಹೋತ್ಸವ ಮತ್ತು ಸಾಮೂಹಿಕ ಪ್ರಸಾದ ವಿತರಣೆ ಜರುಗಿತು. ದೇಗುಲದ ಪ್ರಧಾನ ಅರ್ಚಕ ಶ್ರೀಕಾಂತ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ದೇವಾಲಯ ಸಮಿತಿ ಸದಸ್ಯರಾದ ರಾಮಬ್ರಹ್ಮ ಮತ್ತು ವೆಂಕಟಸೋಮೇಶ್ವರ ಮಾತನಾಡಿ, ಕಾಲಜ್ಞಾನಿ ಪೋತಲೂರು ಶ್ರೀವೀರ ಬ್ರಹ್ಮೇಂದ್ರ ಸ್ವಾಮಿ ಮಹಿಮೆ ಅಪಾರವಾಗಿದ್ದು. ಸಾವಿರಾರು ವರ್ಷಗಳ ಹಿಂದೆ ಬರೆದಂತ ಭವಿಷ್ಯತ್ಕಾಲದ ಹೇಳಿಕೆ ಕಲಿಯುಗದಲ್ಲಿ ಕಾಣಬಹುದಾಗಿದೆ ಎಂದರು. ವಿವಿಧ ಸಮಾಜದ ಮುಖಂಡರಾದ ಸೂರಿಬಾಬು, ಸತ್ಯನಾರಾಯಣ, ರಾಮಕಷ್ಣ, ಪರಬ್ರಹ್ಮ ಸೇರಿ ಗಂಗಾವತಿ, ಹೊಸಪೇಟೆ, ಸಿಂಧನೂರು ಭಾಗದ ಭಕ್ತರು ಪಾಲ್ಗೊಂಡಿದ್ದರು.