

ಶಾಸಕ ಟಿ.ಎಸ್.ಶ್ರೀವತ್ಸ ಗುರುವಾರ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 53ಕ್ಕೆ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆ ಆಲಿಸಿದರು.
ವಾರ್ಡ್ ವ್ಯಾಪ್ತಿಯ ಆಲನಹಳ್ಳಿಯ ಬಡಾವಣೆಯಲ್ಲಿ ಪಾದಯಾತ್ರೆ ನಡೆಸಿದ ಶಾಸಕರಿಗೆ ಬಡಾವಣೆಯ ಸಮಸ್ಯೆಗಳು ದರ್ಶನವಾದವು.
ಸಾರ್ವಜನಿಕರು ನೀರು, ರಸ್ತೆ, ಚರಂಡಿ, ಯುಜಿಡಿ ಸೇರಿದಂತೆ ನಾನಾ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು. ಕಾಲ ಮಿತಿಯೊಳಗೆ ಸಮಸ್ಯೆ ಬಗೆಹರಿಸಬೇಕೆಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಉಪ ಮೇಯರ್ ರೂಪಾ, ಮುಖಂಡರಾದ ಯೋಗೇಶ್, ವಿನಯ್ ಪಂಚಾಜನ್ಯ, ಕೆ.ಜೆ.ರಮೇಶ್ ಇತರರಿದ್ದರು.