

ಬೇಲೂರು: ತಾಲೂಕಿನ ಕಣದೂರು ಶ್ರೀವೀರಭದ್ರೇಶ್ವರಸ್ವಾಮಿಯವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಶ್ರೀವೀರಭದ್ರೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ದೇಗುಲದಲ್ಲಿ ಭಾನುವಾರದಿಂದಲೇ ವಿಶೇಷ ಪೂಜೆ-ಪುನಸ್ಕಾರಗಳನ್ನು ಕೈಗೊಳ್ಳಲಾಗಿತ್ತು. ನಂತರ ಸೋಮವಾರ ವಿವಿಧ ಗ್ರಾಮಗಳ ಗ್ರಾಮಸ್ಥರ ಸಹಕಾರದೊಂದಿಗೆ ರಥೋತ್ಸವಕ್ಕಾಗಿ ಸಿದ್ಧತೆ ಕೈಗೊಂಡು ಮಧ್ಯಾಹ್ನ ಸಾವಿರಾರು ಭಕ್ತರು ರಥವನ್ನು ಎಳೆದು ಭಕ್ತಿ ಪ್ರದರ್ಶಿಸಿದರು.
ರಥೋತ್ಸವದ ನಂತರ ಆಗಮಿಸಿದ್ದ ಭಕ್ತರಿಗೆ ದೇಗುಲ ಸಮಿತಿಯಿಂದ ಪ್ರಸಾದ ವಿತರಿಸಲಾಯಿತು.