ಮಂಗಳೂರು: ಶ್ರೀಸ್ವಾಮಿ ಭಕ್ತ ಮಂಡಳಿ ಕೋಡಿಕಲ್ ಇದರ ವಾರ್ಷಿಕ ಮಹಾಸಭೆಯು ಮಂಡಳಿಯ ಅಧ್ಯಕ್ಷ ಗುರು ರಾಘವೇಂದ್ರ ಪೈ ಇವರ ಅಧ್ಯಕ್ಷತೆಯಲ್ಲಿ ಮಂಡಳಿಯ ಕಚೇರಿಯಲ್ಲಿ ನಡೆಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ದೇವರಾಜ್ .ಕೆ., ಕೋಶಾಧಿಕಾರಿ ದುರ್ಗಾ ಪ್ರಸಾದ್ ಮಲ್ಯ, ಸಲಹೆಗಾರರ ಉದಯ ಬಂಗೇರ ಉಪಸ್ಥಿತರಿದ್ದರು. 2025-27ನೇ ಸಾಲಿನ ಎರಡು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಮಹೇಶ್ ಕುಮಾರ್ ವಾಮಂಜೂರು, ಉಪಾಧ್ಯಕ್ಷರಾಗಿ ಮನಿಷ್ ಕೋಟ್ಯಾನ್, ಕಾರ್ಯದರ್ಶಿ ದಿನೇಶ್ ಕುಮಾರ್, ಜೊತೆ ಕಾರ್ಯದರ್ಶಿ ಸುಧೀರ್ ಕುಮಾರ್, ಕೋಶಾಧಿಕಾರಿ ಶಶಿಧರ್ ಕರ್ಕೇರ, ಲೆಕ್ಕಪರಿಶೋಧಕ ಗುರು ರಾಘವೇಂದ್ರ ಪೈ, ಕ್ರೀಡಾ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಪ್ರದೀಪ್ ಅಮೀನ್ ಸಲಹೆಗಾರರಾಗಿ ಉದಯ ಬಂಗೇರ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ದುರ್ಗ ಪ್ರಸಾದ್ ಮಲ್ಯ, ದೇವರಾಜ್ ಕರ್ಕೇರ, ಬಾಲಚಂದ್ರ ಕೋಟ್ಯಾನ್, ಸುಧೀರ್ ಅಮೀನ್, ಪದ್ಮನಾಭ ಅಂಚನ್, ದಯಾನಂದ್ ಕೋಟ್ಯಾನ್,ಪ್ರಕಾಶ್ ಅಮೀನ್, ಕಿಶೋರ್ ಆಕಾಶ್ ಭವನ,ಯೋಗೀಶ್ ದೇವಾಡಿಗ ಆಯ್ಕೆಯಾದರು.