

ನ್ಯಾಮತಿ: ಕೊರಳಲ್ಲಿ ಲಿಂಗ ಧರಿಸಿ ನಿತ್ಯ ಪೂಜಿಸುವವರೆಲ್ಲ ಲಿಂಗಾಯತರಾಗಿದ್ದು, ತಾರತಮ್ಯವಿಲ್ಲದೆ ಎಲ್ಲರೂ ಒಟ್ಟಾಗಿ ಬಾಳುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು ಸಿದ್ಧಾಂತ ಶಿಖಾಮಣಿಯಲ್ಲಿ ಹೇಳಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಚೀಲೂರಿನಲ್ಲಿ ಬಸವ ಜಯಂತಿ ಅಂಗವಾಗಿ ಶನಿವಾರ ಆಯೋಜಿಸಿದ್ದ ಇಷ್ಟಲಿಂಗಪೂಜೆ, ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಂತರ ಧರ್ಮಸಭೆಯಲ್ಲಿ ಮಾತನಾಡಿದರು.
ಹೊನ್ನಾಳಿ ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಭಗವಂತನ ಮೇಲೆ ಶ್ರದ್ಧೆ-ಭಕ್ತಿ ಇಟ್ಟುಕೊಂಡು ನಡೆದರೆ ಜೀವನ ಸುಂದರವಾಗಿರುತ್ತದೆ ಎಂದರು.
ಅಕ್ಕನ ಬಳಗದ ಸ್ಥಾಪಕಿ ಕಾತ್ಯಾಯನಮ್ಮ, ಅನ್ನಪೂರ್ಣಮ್ಮ, ಜಯಮ್ಮ, ಶಕುಂತಲಮ್ಮ ಹಾಗೂ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು.
ರಾಂಪುರ ಶಿವಕುಮಾರ ಸ್ವಾಮೀಜಿ, ಗೋವಿನಕೊವಿ ಶಿವಯೋಗಿ ಸದ್ಗುರು ಮಹಾಲಿಂಗ ಸ್ವಾಮೀಜಿ, ಕೋರಿ ಯತೀಶ್ಚಂದ್ರ, ಹೊಲ್ತಿಹಾಳ್ ಶಿವಪ್ಪ, ಎಚ್.ಬಿ. ವಾಗೀಶ್, ಜವಳಿ ಚಂದ್ರಶೇಖರಪ್ಪ, ಎಚ್.ಕೆ. ಹಾಲಪ್ಪ ಇತರರಿದ್ದರು.