ಒಳಮೀಸಲಾತಿ ಜಾರಿಗೆ ವಿಳಂಬಕ್ಕೆ ಖಂಡನೆ, ಆ. 18 ರಂದು ತಮಟೆ ಚಳುವಳಿ ಫಿಕ್ಸ್ ಎಂದ ಶ್ರೀಶೈಲ ರತ್ನಾಕರ

MADIGA OKKUTA PRESS MEET
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಜಿಲ್ಲಾ ಮಾದಿಗರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ಭೀಮು ಮೇಲಿನಮನಿ, ಸದಾನಂದ ಗುನ್ನಾಪೂರ, ಭೀಮರಾಯ ಹುಲ್ಲೂರು ಮತ್ತಿತರರಿದ್ದಾರೆ.
Published on

ವಿಜಯಪುರ: ನ್ಯಾ. ನಾಗಮೋಹನ ದಾಸ ವರದಿ ಜಾರಿ ವಿಳಂಬ ಖಂಡಿಸಿ ಆ. 18 ರಂದು ಜಿಲ್ಲೆಯ ಎಲ್ಲ ಶಾಸಕರು ಹಾಗೂ ಸಚಿವರ ಮನೆ ಎದುರು ತಮಟೆ ಬಾರಿಸುವ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಾದಿಗರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ ತಿಳಿಸಿದರು.

ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆ. 19 ರಂದು ಕರೆಯಲಾಗಿದ್ದ ಸಚಿವ ಸಂಪುಟ ಸಭೆ ಆ. 19ಕ್ಕೆ ಮುಂದೂಡಿರುವುದು ಖಂಡನೀಯ. ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು. ಅದಕ್ಕಾಗಿ ಆ. 18ರಂದು ಹೋರಾಟ ಹಮ್ಮಿಕೊಂಡಿರುವುದಾಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಮುಖಂಡ ಭೀಮು ಮೇಲಿನಮನಿ ಮಾತನಾಡಿ, ಸಿದ್ದರಮಯ್ಯನವರು 2013 ರಿಂದ 2018 ರವರೆಗೆ ಮುಖ್ಯಮಂತ್ರಿ ಆದಾಗಲೂ ಇದೇ ರೀತಿ ವಿಳಂಬ ನೀತಿ ಅನುಸರಿಸಿ ಸಮುದಾಯಗಳಿಗೆ ದ್ರೋಹ ಬಗೆದಿದ್ದಾರೆ. ಈಗಲೂ ಅದನ್ನೇ ಮುಂದುವರಿಸಿದ್ದಾರೆ. ಸಿದ್ದರಾಮಯ್ಯನವರು ಮೂವರು ಸಚಿವರ ಕೈಗೊಂಬೆಯಾಗಿದ್ದಾರೆ. ಸ್ವತಂತ್ರವಾಗಿ ಸಚಿವ ಸಂಪುಟ ಸಭೆ ನಡೆಸುವಷ್ಟು ಧೈರ್ಯ ಇಲ್ಲ ಎಂದರು.

ಮುಖಂಡರಾದ ಎಸ್.ಎಚ್. ಲೋಟಗಿ, ವಕೀಲರು, ಸದಾನಂದ ಗುನ್ನಾಪೂರ, ಭೀಮರಾಯ ಹುಲ್ಲೂರು, ವಿಠ್ಠಲ ನಡುವಿನಕೇರಿ, ರವಿಚಂದ್ರ ಹಾದಿಮನಿ, ಪರಶುರಾಮ ರೋಣಿಹಾಳ, ಹನಮಂತ ಬಿರಾದಾರ, ನಾಗರಾಜ ಮಾದರ, ಪ್ರಶಾಂತ ದೊಡಮನಿ, ಅಶೋಕ ನಂದಿ, ಶ್ರೀಕಾಂತ ಬಿರಾದಾರ, ಸಿದ್ದು ಪೂಜಾರಿ, ಶೇಖು ಆಲೂರ, ಹಣಮಂತ ಹಡಲಗಿ, ಸುಭಾಸ ಕಟ್ಟಿಮನಿ, ಏಕನಾತ ಓತಿಹಾಳ, ಅನೀಲ ರತ್ನಾಕರ, ದೇವೇಂದ್ರ ಹಡಗಲಿ, ವಿಜಯ ಮಾದರ, ಶಿವು ರೂಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net