ಉಜ್ಜಿನಿ ಪೀಠಕ್ಕೆ ಶ್ರೀಶೈಲ ಜಗದ್ಗುರುಗಳ ಭೇಟಿ

ujjini Sree
ಉಜ್ಜಿನಿ ಸದ್ಧರ್ಮ ಪೀಠಕ್ಕೆ ಶ್ರೀಶೈಲ ಮಹಾ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಭಾನುವಾರ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು. ಉಜ್ಜಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು ಹಾಗೂ ಭಕ್ತರು ಇದ್ದರು.
Published on

ಉಜ್ಜಿನಿ: ಶ್ರೀಶೈಲ ಮಹಾ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಭಾನುವಾರ ಉಜ್ಜಿನಿ ಸದ್ಧರ್ಮ ಪೀಠಕ್ಕೆ ಭೇಟಿ ನೀಡಿದರು.

ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಕ್ಷೇತ್ರನಾಥ ಶ್ರೀ ಜಗದ್ಗುರು ಮರುಳಸಿದ್ಧೇಶ್ವರ, ಮಹಾಮಾತೆ ಗೌರಿ ಹಾಗೂ ಲಿಂ.ಸಿದ್ಧಲಿಂಗ ಜಗದ್ಗುರುಗಳ ಗದ್ದುಗೆ ದರ್ಶನ ಪಡೆದರು.

ನಂತರ ಶ್ರೀ ಪೀಠದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ಹಾಗೂ ಜಾತ್ರೋತ್ಸವದ ಸಿದ್ಧತೆಯನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಭಕ್ತರಿಗೆ ಆಶೀರ್ವಾದ ನೀಡಿದರು.

ಕೊಟ್ಟೂರಿನ ಡೋಣೂರು ಚಾನಕೋಟಿ ಮಠದ ಡಾ.ಸಿದ್ಧಲಿಂಗ ಶಿವಾಚಾರ್ಯರು, ಸಿದ್ದಲಿಂಗಯ್ಯ, ಮಲ್ಲಿಕಾರ್ಜುನಯ್ಯ, ವೀರೇಶ್, ಲೋಕಪ್ಪ, ಕಾರ್ತಿಕ, ಪೂಜಾರ್ ಸಿದ್ದಲಿಂಗಪ್ಪ, ನಟರಾಜ್ ಇತರರಿದ್ದರು.


ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿಯ ರಥೋತ್ಸವ ಮೇ 12ರಂದು ಜರುಗಲಿದೆ. ಮೇ 13ರಂದು ಶಿಖರಕ್ಕೆ ತೈಲಾಭಿಷೇಕ ಹಾಗೂ ಮೇ 17 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನೆರವೇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net