

ದಾಂಡೇಲಿ: ಶ್ರೀಶೈಲದ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳ ಕುಂಬಾರವಾಡದ ಕಳಸಾಯಿ ಗ್ರಾಮದ ಶಾಖಾ ಮಠದಲ್ಲಿ 5ನೇ ದಿನ ಬುಧವಾರದ ಮೌನ ಅನುಷ್ಠಾನದ ದರ್ಶನ ಸಮಯದಲ್ಲಿ ಭಕ್ತರನ್ನು ಆಶೀರ್ವದಿಸಿದರು.
ಅಂಬಿಕಾನಗರದ ಶ್ರೀ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯರು, ದಾಂಡೇಲಿಯ ಶ್ರೀಶೈಲ ಜಗದ್ಗುರು ಮೌನಾನುಷ್ಠಾನ ಸೇವಾ ಸಮಿತಿಯ ಖಜಾಂಚಿ ಶಂಕರ ಜಡೇಹಿರೇಮಠ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವಾಣಿಜ್ಯ ಹಾಗೂ ಕೈಗಾರಿಕಾ ವಿಭಾಗದ ಜಿಲ್ಲಾಧ್ಯಕ್ಷ ಅಶ್ವಿನಕುಮಾರ ಜುಟ್ಟಿ, ಜಿಲ್ಲಾ ಉಪಾಧ್ಯಕ್ಷ ಅಶೋಕ ಪಾಟೀಲ, ಪ್ರಮುಖರಾದ ಎಸ್.ಜಿ. ಬಿರಾದಾರ, ಎಸ್.ಎಂ. ಪಾಟೀಲ, ಬಸಯ್ಯ ನಾಗಶೆಟ್ಟಿಕೊಪ್ಪ, ಗೀತಾ ಅಶ್ವಿನಕುಮಾರ, ಚೇತನ ಕುಮಾರಮಠ, ನಿರ್ಮಲಾ ಅಜೀತ ಗಣಚಾರಿ ಇತರರು ಉಪಸ್ಥಿತರಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ಯು.ಎಸ್. ಪಾಟೀಲ ಮತ್ತು ಲತಾ ಪಾಟೀಲ ದಂಪತಿಯನ್ನು ಜಗದ್ಗುರುಗಳು ಸನ್ಮಾನಿಸಿದರು.
ಧರ್ಮ ಸಭೆ ಶನಿವಾರ: ಲೋಕ ಕಲ್ಯಾಣಕ್ಕಾಗಿ ಶ್ರೀಶೈಲ ಜಗದ್ಗುರುಗಳ ಮೌನ ಅನುಷ್ಠಾನದ 7 ದಿನಗಳ ನಂತರ ಆ. 12ರಂದು ಬೆಳಗ್ಗೆ 11.30ಕ್ಕೆ ಕುಂಬಾರವಾಡಾದ ಶ್ರೀ ಕ್ಷೇತ್ರ ಕಲ್ಯಾಣ ಮಂಟಪದಲ್ಲಿ ಧರ್ಮ ಸಭೆ ಜರುಗಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉ.ಕ. ಜಿಲ್ಲಾಧ್ಯಕ್ಷ ಉದಯ ಹೂಲಿ ಹಾಗೂ ದಾಂಡೇಲಿ ತಾಲೂಕು ಅಧ್ಯಕ್ಷ ಯು.ಎಸ್. ಪಾಟೀಲ ತಿಳಿಸಿದ್ದಾರೆ.