ಶ್ರೀಶೈಲ ಜಗದ್ಗುರುಗಳ ಹುಟ್ಟುಹಬ್ಬ ಆಚರಣೆ

10201
Published on

ಮಾಂಜರಿ: ಸಮೀಪದ ಸುಕ್ಷೇತ್ರ ಯಡೂರಿನ ಶ್ರೀ ಕಾಡಸಿದ್ದೇಶ್ವರ ಮಠದಲ್ಲಿ ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿಗಳ 49ನೇ ಹುಟ್ಟು ಹಬ್ಬದ ಅಂಗವಾಗಿ 108 ವನಸ್ಪತಿ ಮಿಶ್ರಿತ ರಾಜಾಜಲಾಭಿಷೇಕವನ್ನು ಭಕ್ತಿ ಪೂರ್ವಕವಾಗಿ ಶನಿವಾರ ನೆರವೇರಿಸಲಾಯಿತು.

ವೇದಪಾಠ ಶಾಲೆಯ ಮಕ್ಕಳಿಂದ ಪಂಚಾಮೃತ, ತೆಂಗಿನ ನೀರಿನ ಅಭಿಷೇಕ ಸೇರಿದಂತೆ ವಿವಿಧ ತರಹದ ಅಭಿಷೇಕ, ನಂತರ ರಾಜೋಪಚಾರ ಪೂಜೆ ನೆರವೇರಿಸಲಾಯಿತು. ಬಳಿಕ ಯಡೂರ ಗ್ರಾಮದ ಮುಖಂಡರು, ಭಕ್ತರು, ಶ್ರೀಕಾಡಸಿದ್ದೇಶ್ವರ ಮಠದ ವೇದಪಾಠ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಶ್ರೀಗಳಿಗೆ ಹುಟ್ಟು ಹಬ್ಬದ ಶುಭಾಷಯ ಕೋರಿದರು.

ನೂಲ ಮಠದ ಸೂರುಗೇಶ್ವರ ಶ್ರೀಗಳು, ವ್ಯವಸ್ಥಾಪಕ ಅಡವಯ್ಯ ಅರಳಿಕಟ್ಟಿಮಠ, ಮಲ್ಲಯ್ಯ ಜಡೆ, ಶ್ರೀಶೈಲ ಶಾಸ್ತ್ರಿಗಳು, ಮಲಪ್ಪ ಶಿಂಧೂರ, ವೇದಪಾಠ ಶಾಲೆಯ ವಿದ್ಯಾರ್ಥಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net