ಶ್ರೀ ಸಾಕ್ಷಿ ಪಂಚಾಂಗ ಬಿಡುಗಡೆ

Srisa Almanac released today
ಶ್ರೀಸಾಕ್ಷಿ ಪಂಚಾಂಗ
Published on

ವಿಜಯಪುರ : ಇಲ್ಲಿನ ಗಣೇಶ ನಗರದ ಸಾಕ್ಷಿ ಹನುಮಾನ ಮತ್ತು ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಏ. 6 ರಂದು ಸಂಜೆ 6 ಕ್ಕೆ ವಿದ್ವಾನ್​ ಗುರುರಾಜ ಆಚಾರ್ಯ ಹೆರಕಲ್​ ರಚಿಸಿರುವ ಶ್ರೀಸಾಕ್ಷಿ ಪಂಚಾಂಗ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜ್ಯೋತಿಷಿ ವಿದ್ವಾನ್​ ಶ್ರೀಕಾಂತ ಆಚಾರ್ಯ ಆಶ್ರೀತ ಸಾನ್ನಿಧ್ಯವಹಿಸುವರು. ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್​.ಎಸ್​. ಬೊಮ್ಮನಹಳ್ಳಿ ಅಧ್ಯಕ್ಷತೆ ವಹಿಸುವರು.

ಡಿವೈಎಸ್​ಪಿ ಬಸವರಾಜ ಯಲಿಗಾರ, ಸರ್ಕಾರಿ ನೌಕರರ ಸಂದ ಅಧ್ಯಕ್ಷ ಸುರೇಶ ಶೇಡಶ್ಯಾಳ, ರಾವ ಅಣ್ಣಿಗೇರಿ ಮತ್ತು ಶ್ರೀನಿವಾಸ ಬೆಟಗೇರಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.

ನಂತರ ನಡೆಯುವ ಕಾರ್ಯಕ್ರಮದಲ್ಲಿ ಟಾಕಳಿಯ ಜ್ಯೋತಿಷಿ ನೀಲಕಂಠಯ್ಯ ಶ್ರೀಶೈಲಯ್ಯ ಹಿರೇಮಠ ಅವರಿಗೆ ಸನ್ಮಾನಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net