

ಹೊಸಪೇಟೆ: ಶ್ರೀರುಕ್ಮಿಣಿ ರಾಮ ಕಾರ್ಖಾನೆಗೆ ಜಮೀನು ಮಾರಿ 12 ವರ್ಷ ಕಳೆದರೂ ಉದ್ಯೋಗ ನೀಡಿಲ್ಲ. ಈಗ ಮಾಲೀಕರು ಕಂಪನಿಯ ಜಮೀನನ್ನು ಏಕಾಏಕಿ ಮಾರಾಟ ಮಾಡಲು ಮುಂದಾಗಿದ್ದನ್ನು ಖಂಡಿಸಿ ಹಬೊಹಳ್ಳಿ ತಾಲೂಕಿನ ವರದಾಪುರ ಹಾಗೂ ನಾರಾಯಣದೇವರಕೆರೆ ಗ್ರಾಮದ ರೈತರು ಶುಕ್ರವಾರ ಎಡಿಸಿ ಎನ್.ಮಹೇಶ್ ಬಾಬುಗೆ ಮನವಿ ಸಲ್ಲಿಸಿದರು.
ಶ್ರೀ ರುಕ್ಮ್ಮಿಣಿ ರಾಮ ಕಾರ್ಖಾನೆ ಮಾಲೀಕ ಗೋಪಲ ಹಾಗೂ ಅವರ ಪುತ್ರ ಕಾರ್ತಿಕ್ ಎಂಬುವರು ಮೆದು ಕಬ್ಬಿಣ ತಯಾರಿಸುವ ಕಾರ್ಖಾನೆ ನಿರ್ಮಾಣಕ್ಕೆ ಜಮೀನುಗಳನ್ನು ಖರೀದಿಸಿದ್ದಾರೆ. ಖರೀದಿ ಸಂದರ್ಭದಲ್ಲಿ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ 12 ವರ್ಷ ಕಳೆದರೂ ಕೆಲಸ ನೀಡಿಲ್ಲ. ಕಾರ್ಖಾನೆಯ ಜಮೀನನ್ನು ಈಗ ಬೇರೆಯವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಕೂಡಲೇ ಇದನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು. ರೈತರಾದ ಕೋಲ್ಕಾರ್ ಹನುಮತಂಪ್ಪ, ಮುಗಲಿ ನಾಗೇಂದ್ರಪ್ಪ, ಎಂ.ನಿಂಗಪ್ಪ ಎಸ್.ನಾಗಭೂಷಣ, ಟಿ.ಕೆ.ಹನುಮಂತಪ್ಪ ಇದ್ದರು.