ಶ್ರೀರಂಗಪಟ್ಟಣಕ್ಕೆ ಭಕ್ತರ ಸಂಖ್ಯೆ ಹೆಚ್ಚಳ

SRP _ 13-02(1)
Published on

ಶ್ರೀರಂಗಪಟ್ಟಣ: ಕರೊನಾ ಆತಂಕದ ನಡುವೆಯೂ ಶ್ರೀರಂಗಪಟ್ಟಣ ಹಾಗೂ ಇಲ್ಲಿನ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮತ್ತು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಮಹಾಲಯ ಅಮವಾಸ್ಯೆ, ಪಿತೃಪಕ್ಷ ಹಿನ್ನೆಲೆಯಲ್ಲಿ ಕಳೆದ 3-4 ದಿನಗಳಿಂದ ದಕ್ಷಿಣ ಗಂಗೆ ಕಾವೇರಿಯಲ್ಲಿ ತರ್ಪಣ ಮತ್ತು ಪಿಂಡ ಪ್ರದಾನದಂತಹ ಧಾರ್ಮಿಕ ಕಾರ್ಯ ನಡೆಸಲು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಪಟ್ಟಣಕ್ಕೆ ಆಗಮಿಸುತ್ತಿದ್ದು, ಇಲ್ಲಿನ ಸ್ನಾನಘಟ್ಟ, ಪಶ್ಚಿಮವಾಹಿನಿ, ಸಂಗಮ ಮತ್ತು ಗೋಸಾಯ್ ಘಾಟ್‌ನ ಕಾವೇರಿ ತೀರದಲ್ಲಿ ಎತ್ತನೋಡಿದರೂ ಜನರು ತುಂಬಿ ತುಳುಕುತ್ತಿದ್ದಾರೆ. ಜತೆಗೆ ಇಲ್ಲಿನ ಪ್ರಸಿದ್ಧ ದೇಗುಲಗಳಾದ ಶ್ರೀರಂಗನಾಥ, ಗಂಜಾಂನ ಶ್ರೀ ನಿಮಿಷಾಂಬ ಮತ್ತು ಪ್ರವಾಸಿ ತಾಣಗಳಾದ ಬೇಸಿಗೆ ಅರಮನೆ, ರಂಗನತಿಟ್ಟು ಪಕ್ಷಿಧಾಮಕ್ಕೂ ಜನರು ಭೇಟಿ ನೀಡುತ್ತಿದ್ದಾರೆ.

ದೇವಾಲಯಗಳಿಗೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಶನಿವಾರ ಮತ್ತು ಭಾನುವಾರ ಅಧಿಕಗೊಂಡಿದೆ. ದೇವಾಲಯಗಳ ಒಳಪ್ರವೇಶಕ್ಕೂ ಮುನ್ನ ಭಕ್ತರಿಗೆ ಸಾನಿಟೈಸರ್, ಮಾಸ್ಕ್, ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net