ಮಹಿಳಾ ದಸರಾ, ರೈತ ದಸರಾ, ಮಕ್ಕಳ ದಸರಾ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ. ಅ.17ರ ಮಧ್ಯಾಹ್ನ 2ಗಂಟೆಗೆ ಪಾರಂಪಾರಿಕ ಕುಸ್ತಿ ಪಂದ್ಯಾವಳಿಗಳನ್ನು ಸಂದಿಲ್ ಕೋಟೆಯಲ್ಲಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಿ.18ರಂದು ಮಹಿಳೆಯರಿಗೆ ರಂಗೋಲಿ ಮತ್ತು ಚಮಚದಲ್ಲಿ ನಿಂಬೆಹಣ್ಣು ಇಟ್ಟು ಓಡುವ ಸ್ಫರ್ಧೆ ಆಯೋಜಿಸಿ. ಅಂತೆಯೇ ಅಂದು ಬೆಳಗ್ಗೆ 6 ಹಾಗೂ ಸಂಜೆ 5 ಗಂಟೆಗೆ ಹಾಲು ಕರೆಯುವ ಸ್ಪರ್ಧೆ ನಡೆಯಲಿದೆ. ಪ್ರಮುಖವಾಗಿ ದಸರಾ ಉತ್ಸವಕ್ಕೆ ಭಾಗವಹಿಸುವ ಎಲ್ಲ ಸಾರ್ವಜನಿಕರಿಗೂ ಮಧ್ಯಾಹ್ನದ ಉಪಹಾರವನ್ನು ರಂಗನಾಥ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ. ಕುಡಿಯುವ ನೀರು ಪೂರೈಕೆ ಮಾಡಲು ಅಲ್ಲಿನ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.