

ಮಂಡ್ಯ: ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯಲ್ಲಿನ ಸರ್ವೆ ನಂ 950, 952ರ ಕೋಟೆ ಕಂದಕದ ಜಮೀನನ್ನು ವಕ್ಫ್ ಬೋರ್ಡ್ ಹೆಸರಿಗೆ ಸೇರಿಸಲಾಗಿದೆ. ಆದ್ದರಿಂದ ಕೂಡಲೇ ವಕ್ಫ್ ಹೆಸರಿನಿಂದ ತೆಗೆಯಲು ಅಧಿಕಾರಿಗಳು ಮುಂದಾಗಬೇಕು ಎಂದು ಶ್ರೀರಂಗಪಟ್ಟಣ ನಾಗರಿಕ ಹಿತಾಸಕ್ತಿ ವೇದಿಕೆಯ ಅಧ್ಯಕ್ಷ ಮದನ್‌ರಾವ್ ಆಗ್ರಹಿಸಿದರು.
ದೇವಾಲಯದ ಸುತ್ತಲಿನ ಕೋಟೆ, ಕಂದಕದ ಬಳಿಯಲ್ಲಿ ಜಮೀನು ಪುರಾತತ್ವ ಇಲಾಖೆಗೆ ಸೇರಲಿದೆ. ಆದರೂ ಬದಲಿಸಿದ್ದಾದರೂ ಹೇಗೆ?. ಸರ್ವೆ ನಂ 950ರಲ್ಲಿ 5 ಎಕರೆ 7 ಗುಂಟೆ ಹಾಗೂ 952ರಲ್ಲಿ 3 ಎಕರೆ 22 ಗುಂಟೆ ಜಮೀನು ವಿಜಯನಗರದ ಅರಸರ ಕಾಲದಿಂದಲೂ ಕೋಟೆ, ಕಂದಕ ಹಾಗೂ ಪ್ರಸ್ತುತ ಸಾರ್ವಜನಿಕ ಸಂತೆ ಜಮೀನಾಗಿದೆ. 2023-24ರ ಆರ್‌ಟಿಸಿಯ ಕಾಲಂ 9ರಲ್ಲಿ ಬದಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.
ಆ ಸ್ಥಳದಲ್ಲಿ ಸಾರ್ವಜನಿಕ ಸಂತೆ ನಡೆಯುತ್ತಿದ್ದು, ಪುರಸಭೆಯಿಂದಲೇ ವಕ್ಫ್ ಬೋರ್ಡ್‌ಗೆ 7 ಲಕ್ಷ ರೂಗಳನ್ನು ವಾರ್ಷಿಕ ಬಾಡಿಗೆ ರೂಪದಲ್ಲಿ ನೀಡುತ್ತಿದೆ. ಅಧಿಕಾರಿಗಳೋ ಅಥವಾ ಪ್ರಭಾವಿ ರಾಜಕಾರಣಿಗಳೋ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ವರ್ಗಾಯಿಸಿದ್ದಾರೆ. ಆದ್ದರಿಂದ ಆಗಿರುವ ತಪ್ಪನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆ ಉಪಾಧ್ಯಕ್ಷ ಅಭಿಷೇಕ್, ಶಿವರಾಂ, ಶಂಕರ್ ಇದ್ದರು.