ಶ್ರೀರಂಗಪಟ್ಟಣದಲ್ಲಿ 88 ಯೂನಿಟ್ ರಕ್ತ ಸಂಗ್ರಹ

1 (1)
Published on

ಮಂಡ್ಯ: ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉದ್ಯೋಗದಾತ ಸಂಸ್ಥೆ ಹಾಗೂ ಪರಿವರ್ತನ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ವೈದ್ಯರು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಕ್ಷೇತ್ರದ ರಕ್ತದಾನಿಗಳು ಸ್ವಯಂ ಪ್ರೇರಣೆಯಿಂದ ಆಗಮಿಸಿ 88 ಯೂನಿಟ್ ರಕ್ತದಾನ ಮಾಡಿದರು. ಶಿಬಿರವನ್ನು ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ, ಕಾಂಗ್ರೆಸ್ ಮುಖಂಡ ಎಂ.ಪುಟ್ಟೇಗೌಡ ಉದ್ಘಾಟಿಸಿದರು. ಕ್ಷೇತ್ರದ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಾರುತಿ, ಮಿಮ್ಸ್ ವೈದ್ಯ ಡಾ.ಕಣ್ಮಣಿ, ಸಿಪಿಐ ಪುನೀತ್, ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್, ರಕ್ತನಿಧಿ ಕೇಂದ್ರದ ಭಾನುಮತಿ, ಮುಖಂಡ ರುಕ್ಮಾಂಗದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net