ಅರಕೆರೆಯಲ್ಲಿ ಆತ್ಮಹತ್ಯೆ ತಡೆ ದಿನಾಚರಣೆ

2
Published on

ಶ್ರೀರಂಗಪಟ್ಟಣ : ಯಾವುದೇ ರೀತಿಯ ಕಷ್ಟಗಳು ಬಂದರೂ ಧೈರ್ಯದಿಂದ ಎದುರಿಸಬೇಕೆ ಹೊರತು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ. ಡಿ.ಟಿ ಮಂಜುನಾಥ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ಅರಕೆರೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಅರಕೆರೆ ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಮತ್ತು ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾನವ ಜನ್ಮ ಅತ್ಯಂತ ಶ್ರೇಷ್ಠವಾಗಿದೆ. ಆದರೂ ವಿಶ್ವದಾದ್ಯಂತ ಪ್ರತಿ ದಿನ ಯಾವುದೋ ಒಂದು ಕಾರಣಕ್ಕೆ ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ಆತ್ಮ ಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದನ್ನು ತಡೆಯಲು ಜಾಗೃತಿ ಅವಶ್ಯವಾಗಿದೆ ಎಂದು ಅವರು ಹೇಳಿದರು. ನಾವೆಲ್ಲರೂ ಸೇರಿ ನಮ್ಮ ಸುತ್ತಮುತ್ತ ಸಮಸ್ಯೆಗೆ ಒಳಗಾಗಿರುವವರ ಭಾವನೆಗಳಿಗೆ ಸ್ಪಂದಿಸಬೇಕು. ಕಷ್ಟ ಅಥವಾ ಒತ್ತಡಗಳು ಎದುರಾದಾಗ ಯಾರೇ ಆದರೂ ದುಡುಕುವ ಬದಲು ಒಂದು ನಿಮಿಷ ಸಂಯಮದಿಂದ ವರ್ತಿಸಬೇಕು. ಆತ್ಮ ಸ್ಥೈರ್ಯ ಪಡೆದು ಸಾವನ್ನು ಗೆಲ್ಲಬೇಕು. ಸುಂದರ ಜೀವನ ನಡೆಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net