ನಿಮಿಷಾಂಬಾ ಸನ್ನಿಧಿಯಲ್ಲಿ ಮಾಘಶುದ್ಧ ಹುಣ್ಣಿಮೆ ಮಹೋತ್ಸವ

SRP_12-01jpj
Published on

 ಶ್ರೀ ರಂಗಪಟ್ಟಣ : ಪ್ರಸಿದ್ಧ ಶಕ್ತಿದೇವತೆ ಶ್ರೀ ನಿಮಿಷಾಂಬಾ ದೇವಿ ದೇವಾಲಯದಲ್ಲಿ ಮಾಘಶುದ್ದ ಹುಣ್ಣಿಮೆ ಮಹೋತ್ಸವ ಬುಧವಾರ ಸಹಸ್ರಾರು ಭಕ್ತರ ನಡುವೆ ಸಂಭ್ರಮದ ರಥೋತ್ಸವ ಸಂಪನ್ನಗೊಂಡಿತು. ಪಟ್ಟಣ ಸಮೀಪದ ಗಂಜಾಂನ ದೇವಾಲಯದಲ್ಲಿ ಜಿಲ್ಲಾಡಳಿತ, ಮುಜರಾಯಿ ಇಲಾಖೆ ಹಮ್ಮಿಕೊಂಡಿದ್ದ ಭಾರತ ಹುಣ್ಣಿಮೆ ಕಾರ್ಯಕ್ರಮಕ್ಕಾಗಿ ಮಗಳವಾರದಿಂದಲೇ ಸಾಕಷ್ಟು ಸಿದ್ಧತೆ ನಡೆಸಲಾಗಿತ್ತು. ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಬುಧವಾರ ಬೆಳಗಿನ ಜಾವದಿಂದಲೇ ಅಪೂರ್ವ ಬೀಜಾಕ್ಷರ ಸಹಿತ ನಿಮಿಷಾಂಬೆಗೆ ಪಂಚಾಮೃತ ಅಭಿಷೇಕ, ಮಹಾಭಿಷೇಕ ಸೇವೆ ಅರ್ಪಿಸಲಾಯಿತು. ವಿವಿಧ ಹೂವುಗಳು, ರೇಷ್ಮೆ ವಸ್ತ್ರಗಳು ಹಾಗೂ ಆಭರಣಗಳನ್ನು ತೊಡಿಸಿ ಅಲಂಕರಿಸಿದ್ದು ಗಮನ ಸೆಳೆಯಿತು.

ಬುಧವಾರ ಬೆಳಗ್ಗೆ ಗಣ ಹೋಮ, ನಕ್ಷತ್ರ ಹೋಮ, ದುರ್ಗಾ ಹೋಮ, ಮಹಾಮಂಗಳಾರತಿ ಹಾಗೂ ಸತ್ಯನಾರಾಯಣ ಪೂಜೆ ನಡೆಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net