ಶ್ರೀರಾಮುಲು ವಿರುದ್ಧ ಹೇಳಿಕೆ ಸಲ್ಲ

25 KOTTUR 03 BSR MUGUPPA
ಬಿ.ಎಸ್.ಆರ್. ಮೂಗಪ್ಪ
Published on

ಕೊಟ್ಟೂರು: ವಾಲ್ಮೀಕಿ ಸಮಾಜದ ನಾಯಕ ಶ್ರೀರಾಮುಲು ಅವರನ್ನು ತೆಗಳುವುದು, ಅವಮಾನಕರವಾಗಿ ಮಾತನಾಡುವುದನ್ನು ಜನಾರ್ದನರೆಡ್ಡಿ ತಕ್ಷಣ ನಿಲ್ಲಿಸಬೇಕು ಎಂದು ಬಿಜೆಪಿ ಎಸ್ಟಿ ಮೋರ್ಚಾ ಮಾಜಿ ತಾಲೂಕು ಅಧ್ಯಕ್ಷ ಬಿ.ಎಸ್.ಆರ್. ಮೂಗಪ್ಪ ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀ ರಾಮುಲುನಿಂದ ಜನಾರ್ದನ ರೆಡ್ಡಿಯೇ ಹೊರತು. ರೆಡ್ಡಿಯಿಂದ ಶ್ರೀ ರಾಮುಲು ಅಲ್ಲ ಎಂಬುದನ್ನು ರೆಡ್ಡಿ ಅರ್ಥಮಾಡಿಕೊಳ್ಳಬೇಕು. ಶ್ರೀ ರಾಮುಲು ಯಡಿಯೂರಪ್ಪ ಪರವಾಗಿ ಸದಾ ಬೆಂಬಲಕ್ಕಿದ್ದರು. ಹೀಗಿದ್ದೂ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ರೆಡ್ಡಿ ಪರವಾಗಿ ಮಾತನಾಡುತ್ತಿರುವುದು ಸಲ್ಲ.

ಬಿಜೆಪಿ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡ್ತೀವಿ ಎಂದು ಆಶ್ವಾಸನೆ ನೀಡಿತ್ತಲ್ಲದೆ ಬಹಿರಂಗ ಸಭೆಯಲ್ಲಿಯೂ ಯಡಿಯೂರಪ್ಪ ಹೇಳಿದ್ದರು. ಆದರೆ ಅವರನ್ನು ಉಪಮುಖ್ಯಮಂತ್ರಿ ಮಾಡದೆ ಮೂಲೆಗುಂಪು ಮಾಡಲಾಗಿದೆ ಎಂದರು. ವಾಲ್ಮೀಕಿ ಸಮಾಜದ ಮುಖಂಡರಾದ ಕೆ. ಮಂಜುನಾಥ. ಆರ್. ಮೂಗಪ್ಪ. ವಕೀಲ ಕೆ. ಗುರುಬಸವರಾಜ, ಹನುಮಂತಪ್ಪ, ಟಿ.ರಾಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net