ಕಾಡ್ಲೂರಲ್ಲಿ ಭಕ್ತಿಯಿಂದ ಶ್ರೀರಾಮೋತ್ಸವ ಆಚರಣೆ

ramanavami
ramanavami
Published on

 ರಾಯಚೂರು ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ವನವಾಸಿ ಶ್ರೀ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನದಲ್ಲಿ ಭಾನುವಾರ ಶ್ರೀರಾಮನವಮಿಯನ್ನು ಭಕ್ತಿಯಿಂದ ಆಚರಿಸಲಾಯಿತು.

ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಯೋಧ್ಯೆ ಶ್ರೀರಾಮದೇವರ ಧ್ವಜÁರೋಹಣ, ಶ್ರೀ ರಾಮಾಷ್ಠಕ ಸ್ತೋತ್ರ, ವಾಯುಸ್ತುತಿ, ಅಷ್ಟೋತ್ತರ ಪಾರಾಯಣ. ಶ್ರೀರಾಮದೇವರಿಗೆ, ಶ್ರೀಪ್ರಾಣದೇವರಿಗೆ ಅಭಿಷೇಕ, ಅಲಂಕಾರ, ಶ್ರೀ ರಾಮದೇವರ ತೊಟ್ಟಿಲು ಮಹೋತ್ಸವ ಆಚರಣೆ ಮಾಡಲಾಯಿತು.

ನಂತರ ದಾಮೋದರ್ ಆಚಾರ್ ಪುರೋಹಿತ ಅವರಿಂದ ಶ್ರೀರಾಮದೇವರ ಕಥೆ ನಂತರ ನೈವೇದ್ಯ, ಮಹಾ ಮಂಗಳಾರತಿ, ಪಾನಕ, ಹಣ್ಣು ವಿತರಣೆ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಈ ಸಂದರ್ಭದಲ್ಲಿ ಕಾಡ್ಲೂರು ಸಂಸ್ಥಾನದ ರಂಗರಾವ್ ದೇಸಾಯಿ, ಜಯಕುಮಾರ ದೇಸಾಯಿ, ವಾಸುದೇವಾಚಾರ್ ಕಲ್ಯಾಣಿ, ಶ್ರೀ ನಿವಾಸ ಆಚಾರ್ಯ ಜೋಷಿ, ಪ್ರಹ್ಲಾದ್ ಆಚಾರ್, ಕೊಪ್ರೇಶ ಕುಲಕರ್ಣಿ, ಗುರುರಾಜ ಆಚಾರ ಜೋಷಿ ಸೈದಾಪೂರು, ಸುಬ್ಬರಾವ್ , ವಿಜಯಕುಮಾರ ದೇಸಾಯಿ , ಸುವರ್ಣ ಬಾಯಿ ದೇಸಾಯಿ, ಅಶ್ವಿನಿ ದೇಸಾಯಿ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net