ಸವಣೂರಲ್ಲಿ ಶ್ರೀರಾಮಾಕ್ಷತೆ, ಆಮಂತ್ರಣ ಪತ್ರಿಕೆ ವಿತರಣೆ

RAMAKSHATE SVR
Published on

ಸವಣೂರ: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಿಂದ ಆಗಮಿಸಿರುವ ಮಂತ್ರಾಕ್ಷತೆ, ಆಮಂತ್ರಣ ಪತ್ರಿಕೆ ವಿತರಣೆಗಾಗಿ ಮನೆ ಮನೆಗೆ ತೆರಳಿದ ಸಂಯೋಜಕರಿಗೆ ಭಕ್ತರು ಪುಷ್ಪವೃಷ್ಟಿಯೊಂದಿಗೆ ಆರತಿ ಬೆಳಗಿ ಸ್ವಾಗತಿಸುತ್ತಿದ್ದಾರೆ. ಜ. 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಭವ್ಯ ಮಂದಿರದ ಲೋಕಾರ್ಪಣೆ ಎಲ್ಲರಲ್ಲೂ ಭಕ್ತಿಭಾವವನ್ನು ಮೂಡಿಸಿದೆ.

ವಿಶ್ವ ಹಿಂದು ಪರಿಷತ್, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಮಂಗಳವಾರ ಪಟ್ಟಣದ 12ನೇ ವಾರ್ಡ್ ವ್ಯಾಪ್ತಿಯ ಸಿಂಪಿಗಲ್ಲಿ, ದಂಡಿನಪೇಟೆ ಸೇರಿ ವಿವಿಧೆಡೆಯ ಸುಮಾರು 380ಕ್ಕೂ ಅಧಿಕ ಕುಟುಂಬಸ್ಥರಿಗೆ ಶ್ರೀರಾಮಾಕ್ಷತೆ ಹಾಗೂ ಆಮಂತ್ರಣ ಪತ್ರಿಕೆ ವಿತರಿಸಲಾಯಿತು.

ಕರಸೇವಕರಾದ ಮಹೇಶ ಸಾಲಿಮಠ, ಮಹೇಶ ಮುದಗಲ್, ಮೋತಿಲಾಲ ಸುಗಂಧಿ, ಸಂಯೋಜಕರಾದ ಸಿದ್ದು ತೆಗ್ಗಿಹಳ್ಳಿ, ಆನಂದ ತೆಗ್ಗಿಹಳ್ಳಿ, ಮುತ್ತಪ್ಪ ತೆಗ್ಗಿಹಳ್ಳಿ ಹಾಗೂ ರಾಮ ಭಕ್ತರು ಶ್ರೀರಾಮಾಕ್ಷತೆ ಹಾಗೂ ಆಮಂತ್ರಣ ಪತ್ರಿಕೆ ವಿತರಿಸುವ ಮೂಲಕ ಭಕ್ತಿ ಸೇವೆ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಸಂಯೋಜಕ ಗಿರೀಶ ಮುದಗಲ್ ಮಾತನಾಡಿ, ರಾಷ್ಟ್ರದಲ್ಲಿ ಅಷ್ಟೇ ಅಲ್ಲದೆ, ವಿಶ್ವದ ವಿವಿಧ ರಾಷ್ಟ್ರಗಳಲ್ಲಿರುವ ಶ್ರೀರಾಮ ದೇವರ ಭಕ್ತರ ನೂರಾರು ವರ್ಷಗಳ ಕನಸು ನನಸಾಗುತ್ತಿದೆ. ನಮ್ಮಯ ಜೀವಿತಾವಧಿಯಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳುತ್ತಿರುವುದು ನಮ್ಮ ಪೂರ್ವಜನ್ಮದ ಪುಣ್ಯಯಾಗಿದೆ. ಕೇವಲ ಹಿಂದುಗಳಷ್ಟೇ ಅಲ್ಲದೆ, ಅನ್ಯಧರ್ವಿುಯ ಕೆಲ ಸ್ನೇಹಿತರು ಬೆಂಬಲ ವ್ಯಕ್ತ ಪಡಿಸುತ್ತಿರುವುದು ಸಂತಸ ತಂದಿದೆ. ಆದ್ದರಿಂದ, ಶ್ರೀರಾಮನ ಭಕ್ತರು ಜ. 22ರಂದು ಕೈಗೊಳ್ಳಬೇಕಾದ ಕಾರ್ಯಗಳ ಮಾರ್ಗಸೂಚಿ ನೀಡಲಾಗಿದೆ. ಅದರಂತೆ ಸರ್ವರೂ ಕಾರ್ಯಕ್ರಮ ಆಯೋಜೀಸುವ ಮೂಲಕ ಭಕ್ತಿಭಾವ ಮೆರೆಯಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net