ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ: ಕಂಪ್ಲಿಯಲ್ಲಿ ಆರ್‌ಎಸ್‌ಎಸ್ ಪ್ರಾಂತೀಯ ಸಂಘಟಕ ಕೇಶವ್‌ಜೀ ಮಾಹಿತಿ

050121 Kampli Rammandira Donation Collection Meeting
ಕಂಪ್ಲಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹ ಪೂರ್ವಭಾವಿ ಸಭೆಯಲ್ಲಿ ಆರ್‌ಎಸ್‌ಎಸ್ ಪ್ರಾಂತೀಯ ಸಂಘಟಕ ಕೇಶವ್‌ಜೀ ಮಾತನಾಡಿದರು. ಪ್ರಾಂತೀಯ ಸಂಚಾಲಕ ಜಿ.ರಾಜಶೇಖರ್ ಇದ್ದರು.
Published on

ಕಂಪ್ಲಿ: ಶ್ರೀರಾಮ ಸರ್ವರಿಗೂ ಆದರ್ಶ ಪ್ರಿಯನಾಗಿದ್ದು, ಹಿಂದುಗಳ ಆರ್ಥಿಕ ಕೊಡುಗೆಯಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ಸಂಕಲ್ಪಿಸಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಾಂತೀಯ ಸಂಘಟಕ ಕೇಶವ್‌ಜೀ ಹೇಳಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಬಿಜೆಪಿ, ಆರ್‌ಎಸ್‌ಎಸ್, ವಿಎಚ್‌ಪಿ, ಎಬಿವಿಪಿ ಹಾಗೂ ಬಜರಂಗದಳದಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹ ಪೂರ್ವಭಾವಿ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲಾಗುವುದು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಮಾತನಾಡಿ, 10 ರೂ.ಯಿಂದ 2000 ರೂ.ಗೂ ಅಧಿಕ ದೇಣಿಗೆ ಸಂಗ್ರಹಿಸಲಾಗುವುದು. ಜ.17ರಂದು ಕಂಪ್ಲಿ ತಾಲೂಕಿನಲ್ಲಿ ದೇಣಿಗೆ ಸಂಗ್ರಹಿಸಲಾಗುವುದು ಎಂದು ತಿಳಿಸಿದರು. ಆರ್‌ಎಸ್‌ಎಸ್ ಪ್ರಾಂತೀಯ ಸಂಚಾಲಕ ಜಿ.ರಾಜಶೇಖರ್, ಪ್ರಮುಖರಾದ ಪ್ರಸನ್ನಕುಮಾರ್, ಪುಟ್ಟಿ ಸಚಿನ್, ಚನ್ನಕೇಶವ, ಕಾರ್ತಿಕ್, ಯರ‌್ರಂಗಳಿ ತಿಮ್ಮಾರೆಡ್ಡಿ, ಜಿ.ಸುಧಾಕರ, ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಕೊಡಿದಲ ರಾಜು, ಶಿವರಾಜ ಕಟ್ಟೆ, ಎಸ್.ರಾಘವೇಂದ್ರ, ಕೃಷ್ಣ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net