ಶ್ರೀರಾಮ ವಿದ್ಯಾರ್ಥಿ ನಿಲಯ ಉದ್ಘಾಟನೆ ಇಂದು

sriram hostel
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಫಾರೆಸ್ಟ್ ಕಾಲನಿಯಲ್ಲಿ ನಿರ್ವಣಗೊಂಡಿರುವ ಶ್ರೀ ಉತ್ತರಾದಿಮಠದ ಮೊದಲ ಶ್ರೀ ರಾಮ ವಿದ್ಯಾರ್ಥಿ ನಿಲಯದ ಉದ್ಘಾಟನೆ ಏ. 13ರಂದು ಬೆಳಗ್ಗೆ 8.30ಕ್ಕೆ ಜರುಗಲಿದೆ.

ಶ್ರೀ ಉತ್ತರಾದಿ ಮಠದ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಉದ್ಘಾಟಿಸುವರು. ಬಳಿಕ ಮುದ್ರಾಧಾರಣೆ, ಸಂಸ್ಥಾನ ಪೂಜೆ, ಸಂಜೆ 6 ಗಂಟೆಗೆ ಶ್ರೀಗಳಿಂದ ಪ್ರವಚನ, ಏ. 14ರಂದು ಬೆಳಗ್ಗೆ 8 ಗಂಟೆಗೆ ಮುದ್ರಾಧಾರಣೆ, 9 ಗಂಟೆಗೆ ಸಾಮೂಹಿಕ ಪಾದಪೂಜೆ, ಸಂಜೆ 6 ಗಂಟೆಗೆ ಪ್ರವಚನ, ಬಳಿಕ ಭಕ್ತರಿಗೆ ಫಲ ಮಂತ್ರಾಕ್ಷತೆ ವಿತರಣೆ ಹಾಗೂ ಅಮೃತೋಪದೇಶ ನಡೆಯಲಿದೆ.

ಸುಮಾರು 25 ಗುಂಟೆ ಜಾಗದಲ್ಲಿ 10 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಶ್ರೀರಾಮ ವಿದ್ಯಾರ್ಥಿ ನಿಲಯ ನಿರ್ವಣಗೊಂಡಿದೆ. ವಿದ್ಯಾರ್ಥಿಗಳ ಅನುಕೂಲಕ್ಕೆ 25 ಸುಸಜ್ಜಿತ ಕೊಠಡಿ, ಪ್ರಾರ್ಥನೆ, ಧ್ಯಾನಕ್ಕಾಗಿ ಕೊಠಡಿ, ಭೋಜನಾಲಯ, ಇತ್ಯಾದಿ ವ್ಯವಸ್ಥೆಗಳಿವೆ. ಶ್ರೀ ಶ್ರಿಉತ್ತ್ತರಾದಿ ಮಠದಿಂದ ]ೕ ರಾಮ ವಿದ್ಯಾರ್ಥಿ ನಿಲಯ ನಿರ್ವಣಕ್ಕೆ ಶ್ರೀ ಸತ್ಯಾತ್ಮತೀರ್ಥರು ಶ್ರೀಕಾರ ಹಾಕಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net