ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಭೆ

byn
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಳೆದ ಸಾಲಿನಲ್ಲಿ ಅಂದಾಜು 225 ಕೋಟಿ ರೂ. ಅಧಿಕ ವ್ಯವಹಾರ ನಡೆಸಿ, 79.17 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸಂದ ಸದಸ್ಯರಿಗೆ ಶೇ.13 ಡಿವಿಡೆಂಡ್ ನೀಡಲಾಗುವುದು ಎಂದು ಸಂ ಅಧ್ಯಕ್ಷ ಎಸ್.ರಾಜು ಪೂಜಾರಿ ಹೇಳಿದರು.

ಸಂದ ಪ್ರಧಾನ ಕಚೇರಿ ಆವರಣದಲ್ಲಿ ಭಾನುವಾರ ನಡೆದ ಸಂದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದರು.

ಸಮಾನ ಮನಸ್ಕರು ಸೇರಿ ಸ್ಥಾಪಿಸಿದ ಈ ಸಂಸ್ಥೆ ಜಿಲ್ಲೆಯಲ್ಲಿ ಜನಸಾಮಾನ್ಯರ ಸಂಸ್ಥೆಯಾಗಿ ಹೆಸರು ಗಳಿಸಿದೆ. ಗ್ರಾಹಕರು ಸಂದ ಆಸ್ತಿ. ಅವರಿಗೆ ಉತ್ತಮ ಸೇವೆ ನೀಡುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ನಮ್ಮ ಸಂವು ಕಾರ್ಯನಿರ್ವಹಿಸುತ್ತಿದೆ. ಸದಸ್ಯರ ಸಹಕಾರದಿಂದಲೇ ನಮ್ಮ ಸಂ ಮುನ್ನೆಡೆದಿದೆ ಸವಾಜದ ಆರ್ಥಿಕ, ಸಾವಾಜಿಕ, ಶೈಕ್ಷಣಿಕ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದೆ. ಬೈಂದೂರಿನಲ್ಲಿ ಕಳೆದ 16 ವರ್ಷದ ಹಿಂದೆ ಹುಟ್ಟಿಕೊಂಡ ನಮ್ಮ ಸಂವು ಬೈಂದೂರಿನ ಕೇಂದ್ರ ಸ್ಥಾನದಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ನಾಗೂರು, ಗೋಳಿಹೊಳೆ, ನಾವುಂದ, ಕಂಬದಕೋಣೆಗಳಲ್ಲಿ ಶಾಖೆ ತೆರೆಯಲಾಗಿದೆ. ವರ್ಷಾಂತ್ಯಕ್ಕೆ 43 ಕೋಟಿ ರೂಪಾಯಿ ಠೇವಣಿ ಹೊಂದಿದ್ದು, ಒಟ್ಟು 225 ಕೋಟಿಗೂ ಅಧಿಕ ವಾರ್ಷಿಕ ವ್ಯವಹಾರ ಹೊಂದಿದೆ ಎಂದರು.

ಶೇ.100 ಸಾಲ ವಸೂಲಾತಿ ವಾಡಿದ ಶಾಖಾ ವ್ಯವಸ್ಥಾಪಕರನ್ನು ಗೌರವಿಸಲಾಯಿತು.

ಸಂ ಉಪಾಧ್ಯಕ್ಷ ಎಂ.ವಿನಾಯಕ ರಾವ್, ನಿರ್ದೇಶಕರಾದ ಸೀತಾರಾಮ ಮಡಿವಾಳ, ಅಣ್ಣಪ್ಪ ಪೂಜಾರಿ, ರಾಮಕೃಷ್ಣ ಖಾರ್ವಿ, ಮಂಜು ಪೂಜಾರಿ, ಮಂಜುನಾಥ ಪೂಜಾರಿ, ಪ್ರಶಾಂತ, ಉದ್ಯಾವರ ಎಸ್‌ಡಿಎಂ ಆಯುರ್ವೇದ ಮಹಾವಿದ್ಯಾಲಯದ ಅಧೀಕ್ಷಕ ಡಾ. ನಾಗರಾಜ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ನಾವುಂದ ಶಾಖಾ ಪ್ರಬಂಧಕ ಶ್ರೀನಿವಾಸ ಸ್ವಾಗತಿಸಿದರು. ಸಂದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ ವಾರ್ಷಿಕ ವರದಿ ಮಂಡಿಸಿ, ನಿರೂಪಿಸಿದರು. ಕಂಬದಕೋಣೆ ಶಾಖಾ ವ್ಯವಸ್ಥಾಪಕ ರಾಜೇಂದ್ರ ವಂದಿಸಿದರು. ಸಂತೋಷ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net