

ಹುಬ್ಬಳ್ಳಿ: ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಅಂಗವಾಗಿ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಹುಬ್ಬಳ್ಳಿಯಲ್ಲಿ ಬುಧವಾರ ರ್ಪೂಣಕುಂಭ ಮೂಲಕ ಸ್ವಾಗತಿಸಲಾಯಿತು.
ರಾಮಲಿಂಗೇಶ್ವರನಗರ, ರೇಣುಕಾನಗರ, ರಾಮಕೃಷ್ಣನಗರ, ಗಾಂಧಿನಗರ, ವಿವೇಕಾನಂದ ನಗರ ಮಹಾಲಕ್ಷ್ಮಿ ಲೇಔಟ್ ಇತರೆಡೆಗಳಲ್ಲಿ ಅಕ್ಷತಾ ಕುಂಭಗಳನ್ನು ರಥದಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು.
ಮಹಾನಗರ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ, ವಸಂತ ರಾಯ್ಕರ್, ಸಂತೋಷ ಹಿರೇಕರೂರು, ರಾಚಯ್ಯ ಮಠಪತಿ, ಶ್ರೀಕಾಂತ ಚಿನ್ನದಕೈ, ಪ್ರಕಾಶ್ ಇನಾಮದಾರ, ಸೀಮಾ ಶೆಟ್ಟಿ, ರೂಪಾ ಬಂಗಾಳೆ, ಪೂನಂ ಈಡೂರು, ಭಜನಾ ಮಂಡಳದ ಮಹಿಳೆಯರು ಪಾಲ್ಗೊಂಡಿದ್ದರು.