ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಶ್ರೀರಕ್ಷಾ ಹೆಗಡೆ

Record
Published on

ಸಿದ್ದಾಪುರ: ಅವಲಕ್ಕಿಯ ಮೇಲೆ ರಾಷ್ಟ್ರಗೀತೆ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ತಾಲೂಕಿನ ಮುಗದೂರಿನ ಕು. ಶ್ರೀರಕ್ಷಾ ಹೆಗಡೆ ಹೆಸರು ಸೇರ್ಪಡೆಯಾಗಿದೆ. ಪ್ರಧಾನ ಸಂಪಾದಕ ಡಾ.ಬಿಸ್ವರೂಪ ರಾಯ್ ಚೌಧರಿ ಅವರಿಂದ ಪ್ರಮಾಣ ಪತ್ರ, ಮೆಡಲ್, ಬ್ಯಾಡ್ಜ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ -2024ರ ಪ್ರತಿಯನ್ನು ಪಡೆದುಕೊಂಡಿದ್ದಾಳೆ.

ಶಿರಸಿಯ ಎಂಇಎಸ್ ಕಾಲೇಜಿನಲ್ಲಿ ಬಿಕಾಂ ಎರಡನೇ ವರ್ಷದಲ್ಲಿ ಓದುತ್ತಿದ್ದು, 61ಅವಲಕ್ಕಿ ಕಾಳುಗಳ ಮೇಲೆ ಕೇವಲ 17ನಿಮಿಷ 30ಸೆಕೆಂಡ್‌ಗಳಲ್ಲಿ ರಾಷ್ಟ್ರಗೀತೆ ಬರೆದು ದಾಖಲೆ ನಿರ್ಮಿಸಿದ್ದಾರೆ.

ಶ್ರೀರಕ್ಷಾ ಈ ಹಿಂದೆ ಅವಲಕ್ಕಿಯ ಮೇಲೆ ಹನುಮಾನ್ ಚಾಲೀಸಾ ಬರೆದಿದ್ದಲ್ಲದೆ, ಬಾಳೆ ಎಲೆಯ ಮೇಲೆ ಅಕ್ಕಿಯಿಂದ ಶ್ರೀರಾಮಚಂದ್ರನ ಚಿತ್ರ ಬರೆದು ಗಮನ ಸೆಳೆದಿದ್ದರು. ಇವರು ಮುಗದೂರಿನ ಕೃಷಿಕ ರವಿಶಂಕರ ರಾಮಚಂದ್ರ ಹೆಗಡೆ ಹಾಗೂ ಗಾಯತ್ರಿ ಹೆಗಡೆ ದಂಪತಿ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net