ಶ್ರೀಪತಿ ದಟವಾಡ ಕಾರ್ಯ ಅನನ್ಯ

18Harogeri1
Published on

ಹಾರೂಗೇರಿ: ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶಿಕ್ಷಣ ಸಂಸ್ಥೆ ತೆರೆದು ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿರುವ ಶ್ರೀಪತಿ ದಟವಾಡ ಅವರ ಕಾರ್ಯ ಶ್ಲಾಘನೀಯ ಎಂದು ಬೆಳಗಾವಿ ಲೋಕಾಯುಕ್ತ ಇಲಾಖೆ ಸಿಪಿಐ ರವಿಕುಮಾರ ಧರ್ಮಟ್ಟಿ ಹೇಳಿದರು.

ಪಟ್ಟಣದ ಚಂದ್ರಮಶ್ರೀ ಟ್ರಸ್ಟ್ ವಿಶ್ವಸ್ಥ ಸಂಸ್ಥೆಯ ಜ್ಞಾನಗಂಗೋತ್ರಿ ಪ್ರಾಥಮಿಕ ಹಾಗೂ ಪದ್ಮಾವತಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜ್ಞಾಪ ಉತ್ಸವ-30 ಹಾಗೂ ಸನ್ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ಡಾ.ಚಂದ್ರಶೇಖರ ಗುಡಸಿ ಮಾತನಾಡಿ, ಮಸ್ತಕದಲ್ಲಿ ಪುಸ್ತಕದ ಜ್ಞಾನ ತುಂಬಿಕೊಂಡರೇ ಮಾತ್ರ ಭವಿಷತ್ತಿನಲ್ಲಿ ನೆಮ್ಮದಿ ಜೀವನ ಸಾಗಿಸಲು ಸಾಧ್ಯ. ಶಿಕ್ಷಕರು ಮಕ್ಕಳಿಗೆ ಪಠ್ಯದ ಜತೆಗೆ ಸಂಸ್ಕಾರ ನೀಡಿ ಭವಿಷ್ಯತ್ತಿನ ರೂವಾರಿಗಳನ್ನಾಗಿ ಮಾಡಬೇಕು ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಶ್ರೀಪತಿ ದಟವಾಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಪ್ರಮಾಥ ದಟವಾಡ, ಎಂ.ಎಸ್.ಸಾವಡಕರ, ಡಿ.ಎಸ್.ಡಿಗ್ರಿಜ್, ಮಲ್ಲಿನಾಥ ಹುಕ್ಕೇರಿ, ಆರ್.ಎ.ಬಾವಿ, ಗುಂಡೂರಾವ ದಟವಾಡ, ಅನಿಲ ದಟವಾಡ, ಬಾಬು ಹಳ್ಳೂರ, ಬಾಬು ಪರಮಗೌಡರ, ಯಮನಪ್ಪ ನಾಗನೂರ, ಪ್ರಾಚಾರ್ಯ ರಮೇಶ ಜಾಧವ, ಎಂ.ಎಸ್.ಬಳವಾಡ, ಎಸ್.ಬಿ.ಮೇಕನಮರಡಿ, ಎಸ್.ಎಸ್.ಅಂಗಡಿ, ಆರ್.ಎ.ಅಸ್ಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net