ಶ್ರೀಪಾದಬೋಧ ಸ್ವಾಮೀಜಿ ಸೇವೆ ಸ್ಮರಣೀಯ

4MDL1-Web
ಮೂಡಲಗಿಯಲ್ಲಿ ಈಚೆಗೆ ನಿಧನರಾದ ಶಿವಬೋಧರಂಗ ಸಿದ್ಧಸಂಸ್ಥಾನ ಮಠದ 12ನೇ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿ ಕುಟುಂಬಕ್ಕೆ ಕೇಂದ್ರ ಸಚಿವ ಸುರೇಶ ಅಂಗಡಿ ಮತ್ತು ಸಂಪನ್ಯೂಲ ಸಚಿವ ರಮೇಶ ಜಾರಕಿಹೊಳಿ ಸಾಂತ್ವನ ಹೇಳಿದರು. ಅಮೃತಬೋಧ ಸ್ವಾಮೀಜಿ, ಶ್ರೀಧರಬೋಧ ಶ್ರೀ ಇದ್ದರು.
Published on

ಮೂಡಲಗಿ: ಈಚೆಗೆ ನಿಧನರಾದ ಶಿವಬೋಧರಂಗ ಸಿದ್ಧಸಂಸ್ಥಾನ ಮಠದ 12ನೇ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿ ಕುಟುಂಬಕ್ಕೆ ಸೋಮವಾರ ಶ್ರೀಮಠಕ್ಕೆ ಭೇಟಿ ನೀಡಿದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸಾಂತ್ವನ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಂಗಡಿ, ಈ ಭಾಗದಲ್ಲಿ ಪರಂಪರೆ ಉಳಿಸುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದರು. ಭಾವೈಕ್ಯತೆಗೂ ಸಾಕ್ಷಿಯಾದ ಮಠದ ಪೀಠಾಧಿಪತಿ ನಡೆದಾಡುವ ದೇವರು ಎಂದೇ ಭಕ್ತರ ಹೃದಯದಲ್ಲಿ ನೆಲೆಸಿದ್ದರು. ಅವರ ಅಗಲಿಕೆ ಭಕ್ತರಿಗೆ ಆಘಾತ ಮೂಡಿಸಿದೆ ಎಂದರು. ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಪೂಜ್ಯರು ಮೂಡಲಗಿ ಭಾಗದಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ವಾತಾವರಣ ನಿರ್ಮಿಸಿಕೊಟ್ಟು ಮಠದ ಏಳಿಗೆ ಹಾಗೂ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದರು ಎಂದರು. ಅಮೃತಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿ, ಈರಣ್ಣ ಕಡಾಡಿ, ಸುಭಾಸ ಪಾಟೀಲ, ಪ್ರಕಾಶ ಮಾದರ, ಮಹಾಂತೇಶ ಕುಡಚಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net