ಶ್ರೀನಿವಾಸಪ್ರಸಾದ್ ಅವರ ನಿಧನ ದುಃಖ ತಂದಿದೆ: ಡಿ.ಕೆ.ಶಿವಕುಮಾರ್

DK Shivakumar
Published on

ಶ್ರೀನಿವಾಸಪ್ರಸಾದ್ ಅವರ ನಿಧನ ದುಃಖ ತಂದಿದೆ. ಅವರ ಆರೋಗ್ಯ ಸುಧಾರಿಸುತ್ತದೆ ಎಂದು ಭಾವಿಸಿದ್ದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಆದರೆ ವಿಧಿ ಆಟವೇ ಬೇರೆಯಿತ್ತು. ಎರಡು ಅವಧಿ ಬಿಟ್ಟರೆ ಅವರು ನಾವು ಜತೆಗೆ ರಾಜಕಾರಣ ಮಾಡಿದವರು. ನನಗೆ ಮೊದಲ ಬಾರಿ ಟಿಕೆಟ್ ಸಿಕ್ಕಾಗ ನನಗೆ ಬೆಂಬಲವಾಗಿ ನಿಂತಿದ್ದರು. ಶ್ರೀನಿವಾಸಪ್ರಸಾದ್ ಸಂಸದನಾಗಿ, ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ನಾನು ಮತ್ತು ವಿಶ್ವನಾಥ್ ಮುಂತಾದವರು ಅವರಿಗೆ ಕಾರ್ಯದರ್ಶಿಯಾಗಿದ್ದೇವು. ನಾನು ಮೊದಲ ಬಾರಿ ಶಾಸಕನಾಗಲು ಟಿಕೆಟ್ ಕೊಡಿಸಿದವರು ಶ್ರೀನಿವಾಸಪ್ರಸಾದ್. ರಾಜಕಾರಣದಲ್ಲಿ ನನ್ನ ಪರವಾಗಿ ಸದಾ ನಿಂತಿದ್ದ ವ್ಯಕ್ತಿ. ನಾನು ಸಚಿವನಾಗಲು ಶ್ರೀನಿವಾಸಪ್ರಸಾದ್ ಹೋರಾಟ ಮಾಡಿದ್ದರು. ನಂಬಿದ ವ್ಯಕ್ತಿಯನ್ನು ಎಂದು ಬಿಟ್ಟುಕೊಡುತ್ತಿರಲಿಲ್ಲ ಎಂದರು.

ಸ್ನೇಹಕ್ಕೆ ಮತ್ತೊಂದು ಹೆಸರು ಶ್ರೀನಿವಾಸಪ್ರಸಾದ್. ಅವರು ಯಾವುದೇ ಪಕ್ಷದಲ್ಲಿದ್ದರೂ ನನ್ನ ಅವರ ಸಂಬಂಧ ಉತ್ತಮವಾಗಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net