

ಮಸ್ಕಿ: ಪಟ್ಟಣದ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾನುವಾರ ಶ್ರೀನಿವಾಸ ಕಲ್ಯಾಣೋತ್ಸವ ಜರುಗಿತು.
ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ದೇವರಿಗೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಸಲಾಯಿತು. ನಂತರ ವಿಶೇಷ ಅಲಂಕಾರ ಮಾಡಲಾಯಿತು.
ಹುಣಸಿಹೊಳೆಯ ಕಣ್ವಮಠದ ವಿದ್ಯಾಕಣ್ವವಿರಾಜ ತೀರ್ಥರ ಸಾನ್ನಿಧ್ಯದಲ್ಲಿ ಪುರೋಹಿತರಾದ ಹನುಮೇಶ ಆಚಾರ್ಯ ಬುದ್ದಿನ್ನಿ, ರಾಘವೇಂದ್ರ ದೇಸಾಯಿ ಆಚಾರ್ಯ ಮರಕಲಮದಿನ್ನಿ ಕಲ್ಯಾಣೋತ್ಸವ ನೆರವೇರಿಸಿದರು. ಭಕ್ತರು ಪಾಲ್ಗೊಂಡು ಪುನೀತರಾದರು.
ಸಂಜೆ ಛದ್ಮವೇಷ ಸ್ಪರ್ಧೆ, ಮಹಿಳೆಯರಿಂದ ಕೋಲಾಟ, ಭಜನಾ ಮಂಡಳಿಯಿಂದ ಭಜನೆ ಹಾಗೂ ಪಲ್ಲಕ್ಕಿ ಉತ್ಸವ ಜರುಗಿತು. ಪ್ರಮುಖರಾದ ಹನುಮಂತರಾವ್ ಪಟವಾರಿ, ಹನುಮೇಶ ಕುಲಕರ್ಣಿ, ಪ್ರಸನ್ನ ವೆಂಕಟಾಪುರ, ಗುರುರಾಜ ನಾಯ್ಕ, ರಾಮಚಂದ್ರ ಪುರೋಹಿತ, ವಿನಾಯಕ ತೋರಣದಿನ್ನಿ, ಹನುಮಂತರಾವ್ ವೆಂಕಟಾಪುರ, ಗುಂಡೂರಾವ್ ದೇಸಾಯಿ, ವಿನಾಯಕ ಕುಲಕರ್ಣಿ, ಪ್ರಕಾಶ ಜೋಶಿ, ವೆಂಕಟೇಶ ನಾಯ್ಕ, ರವಿಕುಮಾರ ದೇಶಮುಖ ಇತರರಿದ್ದರು.